'ತುಂಭಾಡ್ 2'ನಲ್ಲಿ ಆಲಿಯಾ ಭಟ್ ಫಿಕ್ಸ್.. ಅಧಿಕೃತ ಘೋಷಣೆ
ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಅಧಿಕೃತವಾಗಿ 'ತುಂಭಾಡ್ 2' ಚಿತ್ರದ ಭಾಗವಾಗಿದ್ದಾರೆ. 2018ರ ಸೂಪರ್ ಹಿಟ್ ಕಲ್ಟ್ ಹಾರರ್ ಸಿನಿಮಾ 'ತುಂಭಾಡ್' ಸೀಕ್ವೆಲ್‌ನಲ್ಲಿ ಆಲಿಯಾ ನಟಿಸುತ್ತಿರುವುದನ್ನು ಚಿತ್ರದ ನಾಯಕ ಹಾಗೂ ನಿರ್ಮಾಪಕ ಸೋಹಮ್ ಶಾ ಖಚಿತಪಡಿಸಿದ್ದಾರೆ.
ಬಾಲಿವುಡ್ ನಟಿ ಆಲಿಯಾ ಭಟ್ ಅಧಿಕೃತವಾಗಿ 'ತುಂಭಾಡ್ 2' ಚಿತ್ರದ ಭಾಗವಾಗಿದ್ದಾರೆ. 2018ರಲ್ಲಿ ಬಿಡುಗಡೆಯಾಗಿ ಕಲ್ಟ್ ಹಾರರ್ ಸಿನಿಮಾವಾಗಿ ಗುರುತಿಸಿಕೊಂಡಿದ್ದ ತುಂಭಾಡ್ ಚಿತ್ರದ ಸೀಕ್ವೆಲ್‌ನಲ್ಲಿ ಆಲಿಯಾ ನಟಿಸಲಿರುವುದನ್ನು ಚಿತ್ರದ ನಾಯಕ ಹಾಗೂ ನಿರ್ಮಾಪಕ ಸೋಹಮ್ ಶಾ ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದಾರೆ. ಈ ಸುದ್ದಿಯಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ. ಸೋಹಮ್ ಶಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಭಟ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು, "ಹೊಸ ಅಧ್ಯಾಯ ಆರಂಭವಾಗಿದೆ. ತುಂಭಾಡ್ 2 ಕುಟುಂಬಕ್ಕೆ ಸ್ವಾಗತ" ಎಂದು ಬರೆದು ನಟಿಯನ್ನು ಬರಮಾಡಿಕೊಂಡಿದ್ದಾರೆ. ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
Next Story

