3 ಇಡಿಯಟ್ಸ್ ಸೋನಂ ವಾಂಗ್‌ಚುಕ್ ಕಥೆಯೆ?  ಆಮಿರ್ ಖಾನ್ ಸ್ಪಷ್ಟನೆ
x

'3 ಇಡಿಯಟ್ಸ್' ಚಿತ್ರದ ರಾಂಚೋ ಪಾತ್ರವು ಸೋನಂ ವಾಂಗ್‌ಚುಕ್ ಅವರನ್ನು ಆಧರಿಸಿಲ್ಲ ಎಂದು ಆಮಿರ್ ಖಾನ್ ಸ್ಪಷ್ಟಪಡಿಸಿದ್ದಾರೆ.

'3 ಇಡಿಯಟ್ಸ್' ಸೋನಂ ವಾಂಗ್‌ಚುಕ್ ಕಥೆಯೆ? ಆಮಿರ್ ಖಾನ್ ಸ್ಪಷ್ಟನೆ

ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಾತನಾಡಿದ ಆಮಿರ್ ಖಾನ್, '3 ಇಡಿಯಟ್ಸ್' ಚಿತ್ರದ ರಾಂಚೋ ಪಾತ್ರವು ಸೋನಂ ವಾಂಗ್‌ಚುಕ್ ಅವರನ್ನು ಆಧರಿಸಿಲ್ಲ ಎಂದು ಸ್ಪಷ್ಟಪಡಿಸಿದರು.


Click the Play button to hear this message in audio format

ಬಾಲಿವುಡ್‌ನ ಸೂಪರ್‌ಹಿಟ್ ಚಿತ್ರ '3 ಇಡಿಯಟ್ಸ್'ನಲ್ಲಿನ ಫುನ್‌ಸುಖ್ ವಾಂಗ್ಡು (ರಾಂಚೋ) ಪಾತ್ರವು ಶಿಕ್ಷಣ ತಜ್ಞ, ಎಂಜಿನಿಯರ್ ಹಾಗೂ ಪರಿಸರ ಹೋರಾಟಗಾರ ಸೋನಂ ವಾಂಗ್‌ಚುಕ್ ಅವರ ಜೀವನವನ್ನು ಆಧರಿಸಿದೆ ಎಂಬ ನಂಬಿಕೆ ಹಲವು ವರ್ಷಗಳಿಂದ ಇದೆ. ಆದರೆ ಈ ಅಭಿಪ್ರಾಯವನ್ನು ನಟ ಆಮಿರ್ ಖಾನ್ ಈಗ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಆಮಿರ್ ಖಾನ್, ʼ3 ಇಡಿಯಟ್ಸ್' ಸಿನಿಮಾ ಅಥವಾ ಫುನ್‌ಸುಖ್ ವಾಂಗ್ಡು ಪಾತ್ರ ಸೋನಂ ವಾಂಗ್‌ಚುಕ್ ಅವರನ್ನು ಆಧರಿಸಿ ರೂಪುಗೊಂಡಿಲ್ಲ. ಸಿನಿಮಾ ಮಾಡುವ ಸಮಯದಲ್ಲಿ ನನಗೆ, ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರಿಗೆ ಹಾಗೂ ಕಥೆಗಾರ ಅಭಿಜಾತ್ ಜೋಶಿ ಅವರಿಗೆ ಸೋನಂ ವಾಂಗ್‌ಚುಕ್ ಅವರ ಪರಿಚಯವೇ ಇರಲಿಲ್ಲ. ಇದು ಹಲವು ವರ್ಷಗಳಿಂದ ಹರಡಿರುವ ತಪ್ಪು ಕಲ್ಪನೆ" ಎಂದು ಹೇಳಿದ್ದಾರೆ.

ಇದೇ ವೇಳೆ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್‌ಚುಕ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆಮಿರ್ ಖಾನ್, ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಹಾಗೂ ಉಪವಾಸವನ್ನು ಅಂತ್ಯಗೊಳಿಸಲಿ ಎಂದು ಆಶಿಸಿದರು. "ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಆ ಗೌರವಕ್ಕೆ '3 ಇಡಿಯಟ್ಸ್' ಚಿತ್ರದ ಪಾತ್ರದೊಂದಿಗೆ ಯಾವುದೇ ಸಂಬಂಧವಿಲ್ಲ" ಎಂದರು.

2009ರಲ್ಲಿ ಬಿಡುಗಡೆಯಾದ '3 ಇಡಿಯಟ್ಸ್' ಸಿನಿಮಾ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ವ್ಯಂಗ್ಯಾತ್ಮಕವಾಗಿ ಚಿತ್ರಿಸಿ ಭಾರೀ ಯಶಸ್ಸು ಗಳಿಸಿತ್ತು. ಚಿತ್ರದ ಬಳಿಕ ಫುನ್‌ಸುಖ್ ವಾಂಗ್ಡು ಪಾತ್ರವನ್ನು ಸೋನಂ ವಾಂಗ್‌ಚುಕ್ ಅವರೊಂದಿಗೆ ಹಲವರು ಹೋಲಿಕೆ ಮಾಡುತ್ತಿದ್ದರು. ಇದೀಗ ಆಮಿರ್ ಖಾನ್ ಅವರ ಹೇಳಿಕೆಯಿಂದ ಈ ಕುರಿತು ಇದ್ದ ಚರ್ಚೆಗೆ ಹೊಸ ತಿರುವು ಸಿಕ್ಕಿದೆ.

Read More
Next Story