‘ಬಿಗ್ ಬಾಸ್ ಕನ್ನಡ 13’ಕ್ಕೆ ಕ್ಷಣಗಣನೆ- ಪ್ರೋಮೋದಲ್ಲಿ ಬಯಲಾಯ್ತು ಸ್ಪರ್ಧಿಗಳ ಸುಳಿವು
x

‘ಬಿಗ್ ಬಾಸ್ ಕನ್ನಡ 13’ರ ಗ್ರ್ಯಾಂಡ್ ಪ್ರೀಮಿಯರ್‌ಗೆ ಕ್ಷಣಗಣನೆ ಶುರುವಾಗಿದೆ.

‘ಬಿಗ್ ಬಾಸ್ ಕನ್ನಡ 13’ಕ್ಕೆ ಕ್ಷಣಗಣನೆ- ಪ್ರೋಮೋದಲ್ಲಿ ಬಯಲಾಯ್ತು ಸ್ಪರ್ಧಿಗಳ ಸುಳಿವು

‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿರುವ ಆಸಿಯಾ ಫಿರ್ದೋಸ್ ಅವರ ಹೆಸರು ಕೂಡ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಪ್ರೋಮೋದಲ್ಲಿ ಕಾಣಿಸಿಕೊಂಡ ಕಣ್ಣುಗಳ ಆಧಾರದಲ್ಲಿ ಅಭಿಮಾನಿಗಳು ಅವರನ್ನು ಗುರುತಿಸಿದ್ದಾರೆ.


Click the Play button to hear this message in audio format

‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಶನಿವಾರವೇ ಬಹುತೇಕ ಸ್ಪರ್ಧಿಗಳು ‘ದೊಡ್ಮನೆ’ ಪ್ರವೇಶಿಸಲಿದ್ದು, ಗ್ರ್ಯಾಂಡ್ ಪ್ರೀಮಿಯರ್ ಭಾನುವಾರ ಪ್ರಸಾರವಾಗಲಿದೆ. ಈ ಬಾರಿ ಅಗ್ನಿಪರೀಕ್ಷೆಯ ಮೂಲಕ ಆಯ್ಕೆಯಾಗುವ ಮೂವರು ಸ್ಪರ್ಧಿಗಳ ಜೊತೆಗೆ 15 ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ.

ಸ್ಪರ್ಧಿಗಳ ಬಗ್ಗೆ ಅಧಿಕೃತ ಘೋಷಣೆಗೂ ಮುನ್ನವೇ ಕುತೂಹಲ ಹೆಚ್ಚಿಸುವ ಕೆಲಸವನ್ನು ಕಲರ್ಸ್ ಕನ್ನಡ ಮಾಡಿದೆ. ಹೊಸ ಪ್ರೋಮೋದಲ್ಲಿ ಕೆಲವು ಸ್ಪರ್ಧಿಗಳ ಮುಖವನ್ನು ಸಂಪೂರ್ಣವಾಗಿ ತೋರಿಸದೆ, ಅವರ ದೇಹದ ಲಕ್ಷಣಗಳು, ಕಣ್ಣುಗಳು ಸೇರಿದಂತೆ ಕೆಲವು ಸುಳಿವುಗಳನ್ನು ನೀಡಲಾಗಿದೆ. ಈ ಸುಳಿವುಗಳ ಆಧಾರದಲ್ಲಿ ಅಭಿಮಾನಿಗಳು ಸಂಭಾವ್ಯ ಸ್ಪರ್ಧಿಗಳ ಹೆಸರನ್ನು ಪತ್ತೆಹಚ್ಚುತ್ತಿದ್ದಾರೆ.

ಸೌಂದರ್ಯ ಶೆಟ್ಟಿ ಹೆಸರು ಮುಂಚೂಣಿಯಲ್ಲಿ

ಮಾಡೆಲಿಂಗ್ ಹಾಗೂ ರಿಯಾಲಿಟಿ ಶೋ ಮೂಲಕ ಗಮನ ಸೆಳೆದಿರುವ ಸೌಂದರ್ಯ ಶೆಟ್ಟಿ ಅವರು ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುವ ಸಾಧ್ಯತೆ ಇದೆ ಎಂಬ ಚರ್ಚೆ ಜೋರಾಗಿದೆ. ಹಿಂದಿಯ ‘MTV ಸ್ಪ್ಲಿಟ್ಸ್‌ವಿಲ್ಲಾ’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಸೌಂದರ್ಯ ಅವರ ದೇಹದ ಮೇಲಿರುವ ಮಚ್ಚೆಯನ್ನು ಪ್ರೋಮೋದಲ್ಲಿನ ಸುಳಿವಿನೊಂದಿಗೆ ಹೋಲಿಕೆ ಮಾಡಿರುವ ಅಭಿಮಾನಿಗಳು, ಅವರೇ ಸ್ಪರ್ಧಿ ಎಂದು ಅಂದಾಜಿಸುತ್ತಿದ್ದಾರೆ.

ಬಿಗ್ ಬಾಸ್‌ಗೆ ಅಧಿಕೃತವಾಗಿ ಪ್ರವೇಶಿಸುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಸೌಂದರ್ಯ ಶೆಟ್ಟಿ ಅವರ ಹೆಸರು ಸಾಕಷ್ಟು ಚರ್ಚೆಯಾಗುತ್ತಿದೆ.

ಆಸಿಯಾ ಫಿರ್ದೋಸ್ ಕೂಡ ಸ್ಪರ್ಧಿಗಳ ಪಟ್ಟಿಯಲ್ಲಿ?

‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಯ ಶ್ರಾವಣಿ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದ ಆಸಿಯಾ ಫಿರ್ದೋಸ್ ಅವರ ಹೆಸರು ಕೂಡ ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಕಣ್ಣುಗಳನ್ನು ಆಧರಿಸಿ ನೆಟ್ಟಿಗರು ಇದು ಆಸಿಯಾ ಅವರೇ ಎಂದು ಗುರುತಿಸಿದ್ದಾರೆ.

ಡ್ರ್ಯಾಗನ್ ಮಂಜು, ತಾಂಡವ್ ರಾಮ್ ಹೆಸರುಗಳೂ ಚರ್ಚೆಯಲ್ಲಿ

ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಡ್ರ್ಯಾಗನ್ ಮಂಜು ಅವರ ಹೆಸರೂ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿದೆ. ಇದರ ಜೊತೆಗೆ ತಾಂಡವ್ ರಾಮ್ ಹಾಗೂ ಸಂಗೀತಾ ಭಟ್ ಅವರ ಹೆಸರುಗಳ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ಈ ಹೆಸರುಗಳ ಕುರಿತು ವಾಹಿನಿಯಿಂದ ಸಂಪೂರ್ಣ ಅಧಿಕೃತ ಸ್ಪಷ್ಟನೆ ಇನ್ನೂ ಹೊರಬಿದ್ದಿಲ್ಲ. ಹೀಗಾಗಿ ಅಂತಿಮ ಸ್ಪರ್ಧಿಗಳ ಪಟ್ಟಿಯನ್ನು ಗ್ರ್ಯಾಂಡ್ ಪ್ರೀಮಿಯರ್‌ನಲ್ಲಿ ತಿಳಿಯಬೇಕಿದೆ.

ಈ ಬಾರಿ ಹೊಸ ರೂಪದಲ್ಲಿ ಬಿಗ್ ಬಾಸ್

ಸೀಸನ್ 13ರಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮಕ್ಕೆ ಹೊಸ ವಿನ್ಯಾಸ ನೀಡಲಾಗಿದೆ. ಈ ಬಾರಿ ಫ್ಲೈಟ್ ಥೀಮ್‌ನೊಂದಿಗೆ ಕಾರ್ಯಕ್ರಮ ಮೂಡಿಬರಲಿದ್ದು, ಸ್ಪರ್ಧಿಗಳನ್ನು ವಿಭಿನ್ನ ಹಂತಗಳಲ್ಲಿ ವಿಂಗಡಿಸುವ ಸಾಧ್ಯತೆಯೂ ಇದೆ.

ಕಳೆದ ಸೀಸನ್‌ನಲ್ಲಿ ಕಾರ್ಯಕ್ರಮದ ಅವಧಿ ಕಡಿಮೆಯಾಗಿದ್ದರೆ, ಈ ಬಾರಿ ಮತ್ತಷ್ಟು ವಿಭಿನ್ನ ಪ್ರಯೋಗಗಳೊಂದಿಗೆ ಶೋ ನಡೆಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ವಿಶೇಷವೆಂದರೆ, ಈ ಬಾರಿ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಗ್ ಬಾಸ್ ಆರಂಭವಾಗುತ್ತಿರುವುದು ಕಾರ್ಯಕ್ರಮದ ಮತ್ತೊಂದು ವಿಶೇಷತೆಯಾಗಿದೆ. ಹೀಗಾಗಿ ಸೀಸನ್ 13ರಲ್ಲಿ ಯಾರೆಲ್ಲ ದೊಡ್ಮನೆ ಪ್ರವೇಶಿಸಲಿದ್ದಾರೆ, ಅಗ್ನಿಪರೀಕ್ಷೆಯ ಮೂಲಕ ಆಯ್ಕೆಯಾಗುವ ಮೂವರು ಯಾರು ಮತ್ತು ಈ ಬಾರಿ ಬಿಗ್ ಬಾಸ್ ಮನೆ ಹೇಗಿರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

Read More
Next Story