ಎ.ಆರ್. ರೆಹಮಾನ್ ಪುತ್ರ ಅಮೀನ್‌ಗೆ ಅಪಘಾತ
x

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಪುತ್ರ ಹಾಗೂ ಗಾಯಕ ಅಮೀನ್ ರೆಹಮಾನ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಎ.ಆರ್. ರೆಹಮಾನ್ ಪುತ್ರ ಅಮೀನ್‌ಗೆ ಅಪಘಾತ

ಕೋಯಂಬೇಡು ಕಡೆಯಿಂದ ಚೆನ್ನೈ ಕಡೆಗೆ ತೆರಳುತ್ತಿದ್ದ ವೇಳೆ ಒಲಿಂಪಿಯಾ ಟೆಕ್ ಪಾರ್ಕ್ ಸಿಗ್ನಲ್ ಸಮೀಪ ಸೈಡ್ ಲೇನ್‌ನಿಂದ ಮುಖ್ಯ ರಸ್ತೆಗೆ ಬಂದ ವ್ಯಾಗನರ್‌ ಕಾರಿಗೆ ಅಮೀನ್ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.


Click the Play button to hear this message in audio format

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಪುತ್ರ ಹಾಗೂ ಗಾಯಕ ಅಮೀನ್ ರೆಹಮಾನ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಚೆನ್ನೈನ ಗುಯಿಂಡಿಯ ಕತಿಪಾರಾ ಫ್ಲೈಓವರ್‌ ಸಮೀಪ ಸೋಮವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅಮೀನ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಮಾಹಿತಿ ಪ್ರಕಾರ, ಮುಂಜಾನೆ ಸುಮಾರು 3.30ರ ವೇಳೆಗೆ ಅಮೀನ್ ಸ್ನೇಹಿತನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕೋಯಂಬೇಡು ಕಡೆಯಿಂದ ಚೆನ್ನೈ ಕಡೆಗೆ ತೆರಳುತ್ತಿದ್ದ ವೇಳೆ ಒಲಿಂಪಿಯಾ ಟೆಕ್ ಪಾರ್ಕ್ ಸಿಗ್ನಲ್ ಸಮೀಪ ಸೈಡ್ ಲೇನ್‌ನಿಂದ ಮುಖ್ಯ ರಸ್ತೆಗೆ ಬಂದ ವ್ಯಾಗನ್‌ಆರ್ ಕಾರಿಗೆ ಅಮೀನ್ ಪ್ರಯಾಣಿಸುತ್ತಿದ್ದ ಪೋರ್ಷೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ಬಳಿಕ ಅಮೀನ್ ಮತ್ತು ಮತ್ತೊಂದು ವಾಹನದ ಚಾಲಕನನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ವ್ಯಾಗನರ್‌ ಕಾರಿನಲ್ಲಿದ್ದ ಚಾಲಕನನ್ನು ಕಲೈಂಜರ್ ಸೆಂಟೆನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂವರಿಗೂ ಚಿಕಿತ್ಸೆ ನೀಡಿ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ಅಪಘಾತದ ಕುರಿತು ಅದ್ಯಾರ್ ಸಂಚಾರ ತನಿಖಾ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಎರಡೂ ವಾಹನಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಗಾಯಕನಾಗಿ ಗುರುತಿಸಿಕೊಂಡಿರುವ ಅಮೀನ್

ಎ.ಆರ್. ರೆಹಮಾನ್ ಅವರ ಪುತ್ರ ಅಮೀನ್ ರೆಹಮಾನ್ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ಮಣಿರತ್ನಂ ನಿರ್ದೇಶನದ ‘ಓ ಕಾದಲ್ ಕಣ್ಮಣಿ’ ಚಿತ್ರದ ಮೂಲಕ 2015ರಲ್ಲಿ ಹಿನ್ನೆಲೆ ಗಾಯನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗೆ ರಾಮ್ ಚರಣ್ ಅಭಿನಯದ ‘ಪೆಡ್ಡಿ’ ಚಿತ್ರದ ತಮಿಳು ಆವೃತ್ತಿಯ ‘ಚಿಕಿರಿ ಚಿಕಿರಿ’ ಹಾಡಿಗೂ ಧ್ವನಿ ನೀಡಿದ್ದಾರೆ.

Read More
Next Story