ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ  ಮಿಂಚಿದ  ಐಶ್ವರ್ಯಾ ರೈ
x

ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ಸಿಮೋನ್ ಆಶ್ಲೆಗೆ ಮುತ್ತಿಟ್ಟು ಸ್ವಾಗತಿಸಿದರು. ಇಬ್ಬರೂ ಕೈಹಿಡಿದು ರ‍್ಯಾಂಪ್ ವಾಕ್ ಮಾಡಿದ್ದು ಗಮನ ಸೆಳೆಯಿತು.

ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

ಐಶ್ವರ್ಯಾ ಮತ್ತು ಸಿಮೋನ್ ಒಟ್ಟಿಗೆ ಫೋಟೋಗೆ ಪೋಸ್ ನೀಡಿದ್ದಲ್ಲದೆ, ಅಂತಿಮ ರ‍್ಯಾಂಪ್ ವಾಕ್ ವೇಳೆ ಕೈಹಿಡಿದು ಕಾಣಿಸಿಕೊಂಡರು. ಕಳೆದ ವರ್ಷದ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು.


Click the Play button to hear this message in audio format

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಮತ್ತೆ ಗಮನ ಸೆಳೆದಿದ್ದಾರೆ. ಲೋರಿಯಲ್ ಪ್ಯಾರಿಸ್‌ನ ಜಾಗತಿಕ ರಾಯಭಾರಿಯಾಗಿರುವ ಐಶ್ವರ್ಯಾ, ‘ಲೆ ಡೆಫಿಲೆ ಲೋರಿಯಲ್ ಪ್ಯಾರಿಸ್’ ಕಾರ್ಯಕ್ರಮದಲ್ಲಿ ರ‍್ಯಾಂಪ್ ವಾಕ್ ಮಾಡಿದರು. ಐಫೆಲ್ ಟವರ್ ಹಿನ್ನೆಲೆಯ ಪ್ಲೇಸ್ ಜೋಫ್ರೆನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಅಂತರರಾಷ್ಟ್ರೀಯ ತಾರೆಯರು ಭಾಗವಹಿಸಿದ್ದರು.

ಕಾರ್ಯಕ್ರಮದ ವೇಳೆ ‘ಬ್ರಿಡ್ಜರ್ಟನ್’ ಖ್ಯಾತಿಯ ನಟಿ ಸಿಮೋನ್ ಆಶ್ಲೆ ಅವರನ್ನು ಐಶ್ವರ್ಯಾ ರೈ ಆತ್ಮೀಯವಾಗಿ ಭೇಟಿಯಾದರು. ಇಬ್ಬರೂ ಪರಸ್ಪರ ಮುತ್ತು ನೀಡಿ ಸ್ವಾಗತಿಸಿಕೊಂಡಿದ್ದು, ಬಳಿಕ ಪಕ್ಕಪಕ್ಕದಲ್ಲಿ ಕುಳಿತು ಮಾತನಾಡಿದರು. ಇಬ್ಬರೂ ಕಪ್ಪು ಬಣ್ಣದ ಉಡುಪು ಧರಿಸಿದ್ದರು. ಈ ಕ್ಷಣಗಳ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕೈಹಿಡಿದು ರ‍್ಯಾಂಪ್ ವಾಕ್

ಐಶ್ವರ್ಯಾ ಮತ್ತು ಸಿಮೋನ್ ಕಾರ್ಯಕ್ರಮದ ವೇಳೆ ಕೈಹಿಡಿದು ಪೋಸ್ ನೀಡಿದ್ದು, ಅಂತಿಮ ರ‍್ಯಾಂಪ್ ವಾಕ್‌ನಲ್ಲೂ ಇಬ್ಬರೂ ಕೈಹಿಡಿದು ಕಾಣಿಸಿಕೊಂಡರು. ಕಳೆದ ವರ್ಷದ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲೂ ಇಬ್ಬರೂ ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದರು. ಈ ಬಾರಿ ಅವರ ಆತ್ಮೀಯ ಭೇಟಿಗೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕೆಂಪು ಕೂದಲಿನ ಹೊಸ ಲುಕ್‌ನಲ್ಲಿ ಐಶ್ವರ್ಯಾ

ಈ ಬಾರಿ ಐಶ್ವರ್ಯಾ ರೈ ಕಪ್ಪು ವೆಲ್ವೆಟ್ ಗೌನ್ ಮತ್ತು ಕ್ರಿಸ್ಟಲ್ ಅಲಂಕೃತ ಕೇಪ್ ಧರಿಸಿದ್ದರು. ಅವರ ಹೊಸ ಕೆಂಪು ಬಣ್ಣದ ಕೂದಲಿನ ಲುಕ್ ಕೂಡ ವಿಶೇಷ ಗಮನ ಸೆಳೆಯಿತು. ಸ್ಟೈಲಿಸ್ಟ್ ಮೋಹಿತ್ ರೈ ಅವರು ಅವರ ಲುಕ್‌ನ್ನು ಸಿದ್ಧಪಡಿಸಿದ್ದರು. ರ‍್ಯಾಂಪ್‌ನಲ್ಲಿ ಐಶ್ವರ್ಯಾ ಜೊತೆ ಕೆಂಡಲ್ ಜೆನ್ನರ್, ಸಿಮೋನ್ ಆಶ್ಲೆ, ವಿಯೋಲಾ ಡೇವಿಸ್ ಸೇರಿದಂತೆ ಹಲವು ಜಾಗತಿಕ ತಾರೆಯರು ಕಾಣಿಸಿಕೊಂಡರು.

ರ‍್ಯಾಂಪ್ ವಾಕ್ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಐಶ್ವರ್ಯಾ ರೈ ಅವರ ದೇಹದ ತೂಕದ ಕುರಿತು ಕೆಲವರು ಕಾಮೆಂಟ್ ಮಾಡಿದ್ದು, ಬಾಡಿ ಶೇಮಿಂಗ್‌ಗೆ ಗುರಿಯಾಗಿದ್ದಾರೆ. ಕೆಲವರು ಅವರು ಗರ್ಭಿಣಿಯಾಗಿರಬಹುದೇ ಎಂದು ಪ್ರಶ್ನಿಸಿದರೆ, ಮತ್ತಷ್ಟು ಮಂದಿ ತೂಕ ಇಳಿಸುವ ಔಷಧಿ ಓಜೆಂಪಿಕ್ ಬಳಸುವಂತೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.

Read More
Next Story