ತಂಗಿಗೆ ನಟಿ ಅಂಬಿಕಾ 46 ಕೋಟಿ ರೂ. ವಂಚನೆ?
ಹಿರಿಯ ನಟಿ ರಾಧಾ ಅವರು ಸಹೋದರಿ ಅಂಬಿಕಾ ಹಾಗೂ ಸಹೋದರ ಮಲ್ಲಿಕಾರ್ಜುನ ವಿರುದ್ಧ 46 ಕೋಟಿ ರೂ. ಮೌಲ್ಯದ ಚೆಕ್‌ಗಳ ದುರ್ಬಳಕೆ ಆರೋಪಿಸಿ ದೂರು ನೀಡಿದ್ದಾರೆ.
ಹಿರಿಯ ನಟಿ ರಾಧಾ ಅವರು ತಮ್ಮ ಸಹೋದರಿ ಹಾಗೂ ನಟಿ ಅಂಬಿಕಾ ಮತ್ತು ಸಹೋದರ ಮಲ್ಲಿಕಾರ್ಜುನ ಕುಂಜನ್ ನಾಯರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸುಮಾರು 46 ಕೋಟಿ ರೂ. ಮೌಲ್ಯದ ಚೆಕ್‌ಗಳ ದುರ್ಬಳಕೆ ಆರೋಪ ಮಾಡಿರುವುದು ಪ್ರಕರಣದ ಪ್ರಮುಖ ಅಂಶವಾಗಿದೆ. ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ, ತಮ್ಮ ಅನುಮತಿಯಿಲ್ಲದೆ ಸಹಿ ಮಾಡಿದ್ದ ಖಾಲಿ ಚೆಕ್‌ಗಳನ್ನು ಪಡೆದು ಹಣ ಪಡೆಯಲು ಪ್ರಯತ್ನಿಸಲಾಗಿದೆ ಎಂದು ರಾಧಾ ಆರೋಪಿಸಿದ್ದಾರೆ.
Next Story

