40 ಲಕ್ಷ ರೂ. ವಾಪಸ್ ನೀಡದ ಆರೋಪ: ಮದ್ರಾಸ್ ಹೈಕೋರ್ಟ್ ಮೊರೆ ಹೋದ ನಟ ರಾಜ್‌ಕಿರಣ್
x

ನಿರೀಕ್ಷಣಾ ಜಾಮೀನು ಕೋರಿ ರಾಜ್‌ಕಿರಣ್ ಅರ್ಜಿ

40 ಲಕ್ಷ ರೂ. ವಾಪಸ್ ನೀಡದ ಆರೋಪ: ಮದ್ರಾಸ್ ಹೈಕೋರ್ಟ್ ಮೊರೆ ಹೋದ ನಟ ರಾಜ್‌ಕಿರಣ್

ತಮ್ಮ ವಿರುದ್ಧದ ಪ್ರಕರಣವನ್ನು ರಾಜ್‌ಕಿರಣ್ ಪ್ರಶ್ನಿಸಿದ್ದು, ಇದು ಮೂಲತಃ ಸಿವಿಲ್ ಸ್ವರೂಪದ ಹಣಕಾಸು ವಿವಾದವಾಗಿದೆ. ಆದರೆ ಅದಕ್ಕೆ ಕ್ರಿಮಿನಲ್ ಬಣ್ಣ ನೀಡಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.


Click the Play button to hear this message in audio format

ಸಿನಿಮಾ ನಿರ್ಮಾಣಕ್ಕೆ ಪಡೆದಿದ್ದ ಮುಂಗಡ ಹಣದ ಪೈಕಿ 40 ಲಕ್ಷ ರೂ. ವಾಪಸ್ ನೀಡದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳು ನಟ ರಾಜ್‌ಕಿರಣ್ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 2022ರಲ್ಲಿ ಪ್ರಸ್ತಾವಿತ ಸಿನಿಮಾವೊಂದಕ್ಕಾಗಿ ನಿರ್ಮಾಪಕರಿಂದ 50 ಲಕ್ಷ ರೂ. ಮುಂಗಡ ಪಡೆದಿದ್ದರು. ಈ ಪೈಕಿ 10 ಲಕ್ಷ ರೂ. ಹಣವನ್ನು 2025ರಲ್ಲಿ ವಾಪಸ್ ನೀಡಿದ್ದು, ಉಳಿದ 40 ಲಕ್ಷ ರೂ. ಪಾವತಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಉಳಿದ ಹಣವನ್ನು ವಾಪಸ್ ನೀಡದ ಹಿನ್ನೆಲೆಯಲ್ಲಿ ನಿರ್ಮಾಪಕರು ಮಿಂಜೂರ್ ಪೊಲೀಸರಿಗೆ ದೂರು ನೀಡಿದ್ದರು. ಪೊನ್ನೇರಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಆದೇಶದ ಬಳಿಕ ಆಗಸ್ಟ್ 28ರಂದು ರಾಜ್‌ಕಿರಣ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸಿವಿಲ್ ವಿವಾದಕ್ಕೆ ಕ್ರಿಮಿನಲ್ ಬಣ್ಣ ಎಂದ ರಾಜ್‌ಕಿರಣ್

ತಮ್ಮ ವಿರುದ್ಧದ ಪ್ರಕರಣವನ್ನು ರಾಜ್‌ಕಿರಣ್ ಪ್ರಶ್ನಿಸಿದ್ದು, ಇದು ಮೂಲತಃ ಸಿವಿಲ್ ಸ್ವರೂಪದ ಹಣಕಾಸು ವಿವಾದವಾಗಿದೆ. ಆದರೆ ಅದಕ್ಕೆ ಕ್ರಿಮಿನಲ್ ಬಣ್ಣ ನೀಡಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ. ತನಿಖೆಯಿಂದ ತಪ್ಪಿಸಿಕೊಳ್ಳುವುದಿಲ್ಲ ಹಾಗೂ ತಲೆಮರೆಸಿಕೊಳ್ಳುವ ಉದ್ದೇಶವೂ ಇಲ್ಲ ಎಂದು ಅವರು ತಿಳಿಸಿದ್ದಾರೆ. ಅರ್ಜಿ ಶೀಘ್ರದಲ್ಲೇ ವಿಚಾರಣೆಗೆ ಬರುವ ನಿರೀಕ್ಷೆಯಿದೆ.

Read More
Next Story