ಮಿಥುನ್ ಚಕ್ರವರ್ತಿ ಅವರಿಗೆ  ದಾದಾಸಾಹೇಬ್ ಫಾಲ್ಕೆ
x
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣವನ್ನು ಸ್ವೀಕರಿಸುತ್ತಿರುವ ಮಿಥುನ್ ಚಕ್ರವರ್ತಿ

ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ

ಈ ವರ್ಷದ ಆರಂಭದಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣಕ್ಕೆ ಪಾತ್ರರಾದ ಮಿಥುನ್ ಚಕ್ರವರ್ತಿ, ನಟನೆಗಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ‌ ಪಡೆದಿದ್ದಾರೆ.


ಮೃಗಯಾ , ಸುರಕ್ಷಾ , ಡಿಸ್ಕೋ ಡ್ಯಾನ್ಸರ್ ಮತ್ತು ಡ್ಯಾನ್ಸ್ ಡ್ಯಾನ್ಸ್‌ ಮತ್ತಿತರ ಚಲನಚಿತ್ರಗಳ ತಾರೆ, ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಸಾಧನೆಗೆ ಸರ್ಕಾರದ ಅತ್ಯುನ್ನತ ಮನ್ನಣೆಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ʻಮಿಥುನ್ ದಾ ಅವರ ಸಿನಿಮಾ ಪ್ರಯಾಣವು ಭವಿಷ್ಯದ ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತದೆ! ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ ನೀಡಲು ತೀರ್ಪುಗಾರರ ಸಮಿತಿ ನಿರ್ಧರಿಸಿದೆ,ʼ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ (ಸೆಪ್ಟೆಂಬರ್ 30) ಎಕ್ಸ್ ನಲ್ಲಿ ಹೇಳಿದ್ದಾರೆ.

ಅಕ್ಟೋಬರ್ 8, 2024 ರಂದು ನಡೆಯುವ 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಚಕ್ರವರ್ತಿ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸಚಿವರು ಹೇಳಿದರು.

ಪ್ರಶಸ್ತಿ- ಮನ್ನಣೆ: 1950 ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದ ಮಿಥುನ್‌, ಮೃಣಾಲ್ ಸೇನ್ ಅವರ 1976 ರ ಚಲನಚಿತ್ರ ಮೃಗಯಾದೊಂದಿಗೆ ನಟನೆ ಜೀವನ ಆರಂಭಿಸಿದರು. ಈ ಚಲನಚಿತ್ರ ಅವರಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟಿತು.

ತಹದರ್ ಕಥಾ (1992) ಮತ್ತು ಸ್ವಾಮಿ ವಿವೇಕಾನಂದ (1998) ಚಿತ್ರಕ್ಕೆ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು. ಇತ್ತೀಚೆಗೆ ದಿ ಕಾಶ್ಮೀರ್ ಫೈಲ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಕಸಮ್ ಪೈದಾಕರ್ನೆ ವಾಲೆ ಕಿ ಮತ್ತು ಕಮಾಂಡೋ ಮುಂತಾದ ಚಿತ್ರಗಳಿಂದ ಹೆಸರುವಾಸಿಯಾಗಿದ್ದಾರೆ.

ಟಿಎಂಸಿ ಮಾಜಿ ರಾಜ್ಯಸಭೆ ಸದಸ್ಯರಾಗಿರುವ ಅವರಿಗೆ ಈ ವರ್ಷದ ಆರಂಭದಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಾಪ್ತವಾಗಿತ್ತು. ಅವರು ಈಗ ಬಿಜೆಪಿಯಲ್ಲಿದ್ದಾರೆ.

Read More
Next Story