2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ: 119 ದಿನ ರಜೆ,  ಕಲಿಕೆಗೆ 181 ದಿನ!
x

ರಾಜ್ಯದ ಶಾಲೆಗಳ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದೆ.

2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ: 119 ದಿನ ರಜೆ, ಕಲಿಕೆಗೆ 181 ದಿನ!

ರಾಜ್ಯದ ಶಾಲೆಗಳ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದೆ. ಮೇ 29ರಿಂದ ತರಗತಿ ಆರಂಭವಾಗಲಿದ್ದು, ದಸರಾ ಮತ್ತು ಬೇಸಿಗೆ ರಜೆ ಹಾಗೂ ಪರೀಕ್ಷಾ ದಿನಗಳ ಪೂರ್ಣ ಮಾಹಿತಿ ಈ ಲೇಖನದಲ್ಲಿದೆ.


Click the Play button to hear this message in audio format

ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2026-27ನೇ ಶೈಕ್ಷಣಿಕ ವರ್ಷದ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.-

ಮೇ 29ರಿಂದ ಹೊಸ ಶೈಕ್ಷಣಿಕ ವರ್ಷ ಅಧಿಕೃತವಾಗಿ ಆರಂಭವಾಗಲಿದ್ದು, ಅಕ್ಟೋಬರ್ 2ರವರೆಗೆ ಮೊದಲ ಅವಧಿಯ ತರಗತಿಗಳು ನಡೆಯಲಿವೆ. ಈ ನೂತನ ಕ್ಯಾಲೆಂಡರ್ ರಾಜ್ಯ ಪಠ್ಯಕ್ರಮವನ್ನು ಅನುಸರಿಸುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅನ್ವಯವಾಗಲಿದೆ.

ಅಕ್ಟೋಬರ್ 3ರಿಂದ ಅಕ್ಟೋಬರ್ 21ರವರೆಗೆ ವಿದ್ಯಾರ್ಥಿಗಳಿಗೆ ದಸರಾ ರಜೆ ಇರಲಿದೆ. ಅಕ್ಟೋಬರ್ 22ರಿಂದ ಎರಡನೇ ಅವಧಿಯ ತರಗತಿಗಳು ಪುನಾರಂಭಗೊಂಡು, ಏಪ್ರಿಲ್ 10, 2027ರವರೆಗೆ ಮುಂದುವರಿಯಲಿವೆ. ಏಪ್ರಿಲ್ 11ರಿಂದ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಪ್ರಾರಂಭವಾಗಲಿದೆ ಎಂದು ಇಲಾಖೆ ತಿಳಿಸಿದೆ.

ಒಟ್ಟು119 ರಜಾ ದಿನಗಳು

ಈ ಬಾರಿ ಒಟ್ಟು 365 ದಿನಗಳ ವರ್ಷದಲ್ಲಿ 245 ದಿನಗಳನ್ನು ಕರ್ತವ್ಯದ ದಿನಗಳೆಂದು ಗುರುತಿಸಲಾಗಿದೆ. ಉಳಿದ 119 ರಜಾ ದಿನಗಳಾಗಿರುತ್ತವೆ. ಒಟ್ಟು ಶಾಲಾ ದಿನಗಳಲ್ಲಿ ಕಲಿಕಾ ಪ್ರಕ್ರಿಯೆಗಾಗಿ 181 ದಿನಗಳನ್ನು ಮೀಸಲಿಡಲಾಗಿದ್ದು, ಪರೀಕ್ಷೆ ಮತ್ತು ಮೌಲ್ಯಾಂಕನಕ್ಕಾಗಿ 26 ದಿನಗಳು, ಪಠ್ಯೇತರ ಚಟುವಟಿಕೆಗಳಿಗೆ 24 ದಿನಗಳು ಹಾಗೂ ಫಲಿತಾಂಶದ ವಿಶ್ಲೇಷಣೆಗಾಗಿ 10 ದಿನಗಳನ್ನು ನಿಗದಿಪಡಿಸಲಾಗಿದೆ. ಸ್ಥಳೀಯ ರಜೆಗಳಿಗಾಗಿ 4 ದಿನಗಳ ಅವಕಾಶ ಕಲ್ಪಿಸಲಾಗಿದೆ.

ದಾಖಲಾತಿ ಮತ್ತು ಪಠ್ಯಪುಸ್ತಕ ವಿತರಣೆ

ಹೊಸ ವರ್ಷದ ದಾಖಲಾತಿ ಪ್ರಕ್ರಿಯೆಯನ್ನು ಜೂನ್ 30ರ ಒಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ವಿಶೇಷವಾಗಿ 6ರಿಂದ 18 ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಅವರನ್ನು ಮರಳಿ ಶಾಲೆಗೆ ಸೇರಿಸಲು 'ದಾಖಲಾತಿ ಜಾಗೃತಿ ಅಭಿಯಾನ'ಕ್ಕೆ ಇಲಾಖೆ ಹೆಚ್ಚಿನ ಒತ್ತು ನೀಡಿದೆ. ಇನ್ನು 2027ರ ಜೂನ್ ಮೊದಲ ವಾರದಲ್ಲೇ ಮುಂದಿನ ಸಾಲಿನ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಈಗಲೇ ನಿರ್ದೇಶನ ನೀಡಲಾಗಿದೆ.

ರಾಜ್ಯಾದ್ಯಂತ ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಲು ಈ ವಾರ್ಷಿಕ ಕಾರ್ಯಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆಯ ಆಯುಕ್ತರು ಎಲ್ಲಾ ಶಾಲಾ ಮುಖ್ಯಸ್ಥರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Read More
Next Story