NEET-UG re-exam: Details of examination centers announced, exam on June 21st!
x

ಸಾಂದರ್ಭಿಕ ಚಿತ್ರ

ನೀಟ್-ಯುಜಿ ಮರು ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವಿವರ ಪ್ರಕಟ, ಜೂ 21ಕ್ಕೆ ಪರೀಕ್ಷೆ!

ಜೂ. 21ರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರ ವರೆಗೆ ಆಫ್‌ಲೈನ್ ಸ್ವರೂಪದಲ್ಲಿಯೇ ಮರು ಪರೀಕ್ಷೆ ನಡೆಯಲಿದೆ. ಭಾರತದಾದ್ಯಂತ ವಿವಿಧ 551 ನಗರಗಳು ಹಾಗೂ ವಿದೇಶಗಳ 14 ಪ್ರಮುಖ ನಗರಗಳಲ್ಲಿ ಪರೀಕ್ಷೆ ನಡೆಸಲು ಎನ್‌ಟಿಎ ಸಕಲ ಸಿದ್ಧತೆ ಮಾಡಿಕೊಂಡಿದೆ.


Click the Play button to hear this message in audio format

ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದಾಗಿದ್ದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ 'ನೀಟ್-ಯುಜಿ 2026'ರ ಮರು ಪರೀಕ್ಷೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಹತ್ವದ ಮಾಹಿತಿ ನೀಡಿದೆ. ಜೂನ್ 21ರಂದು ನಡೆಯಲಿರುವ ಮರು ಪರೀಕ್ಷೆಯ ಕೇಂದ್ರಗಳ ವಿವರಗಳನ್ನು ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.

ಈ ಕುರಿತು ತನ್ನ ಅಧಿಕೃತ 'ಎಕ್ಸ್' ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಎನ್‌ಟಿಎ, ಪರೀಕ್ಷಾರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಾ ಕೇಂದ್ರಗಳ ವಿವರಗಳನ್ನು ವೀಕ್ಷಿಸಬಹುದು ಹಾಗೂ ಮಾಹಿತಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಜೂ. 21ಕ್ಕೆ ಪರೀಕ್ಷೆ

ಜೂ. 21ರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರ ವರೆಗೆ ಆಫ್‌ಲೈನ್ ಸ್ವರೂಪದಲ್ಲಿಯೇ ಮರು ಪರೀಕ್ಷೆ ನಡೆಯಲಿದೆ. ಭಾರತದಾದ್ಯಂತ ವಿವಿಧ 551 ನಗರಗಳು ಹಾಗೂ ವಿದೇಶಗಳ 14 ಪ್ರಮುಖ ನಗರಗಳಲ್ಲಿ ಪರೀಕ್ಷೆ ನಡೆಸಲು ಎನ್‌ಟಿಎ ಸಕಲ ಸಿದ್ಧತೆ ಮಾಡಿಕೊಂಡಿದೆ.

ಶೀಘ್ರವೇ ಪ್ರವೇಶ ಪತ್ರ ಬಿಡುಗಡೆ

ಈಗ ಬಿಡುಗಡೆ ಮಾಡಲಾಗಿರುವುದು ಕೇವಲ ಪರೀಕ್ಷೆ ನಡೆಯುವ ನಗರ ಮತ್ತು ಕೇಂದ್ರದ ಮುಂಗಡ ಮಾಹಿತಿ ಪತ್ರ ಮಾತ್ರವಾಗಿದ್ದು, ಇದನ್ನು 'ಪ್ರವೇಶ ಪತ್ರ' ಎಂದು ಪರಿಗಣಿಸಲಾಗುವುದಿಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ. ಪರೀಕ್ಷಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ವಿತರಿಸಲಾಗುವುದು. ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ವಿವರಗಳಿಗಾಗಿ ನಿರಂತರವಾಗಿ ಎನ್‌ಟಿಎ ಅಧಿಕೃತ ವೆಬ್‌ಸೈಟ್ ಗಮನಿಸುತ್ತಿರಬೇಕು ಎಂದು ಸಂಸ್ಥೆ ಮನವಿ ಮಾಡಿದೆ.

ಮರು ಪರೀಕ್ಷೆ ಏಕೆ ?

ಕಳೆದ ಮೇ 3ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎನ್‌ಟಿಎ ಪರೀಕ್ಷೆಯನ್ನು ರದ್ದುಗೊಳಿಸಿ, ಮರು ಪರೀಕ್ಷೆ ನಡೆಸುವುದಾಗಿ ಘೋಷಿಸಿತ್ತು. ಸದ್ಯ ಈ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ತೀವ್ರ ತನಿಖೆ ನಡೆಸುತ್ತಿದ್ದು, ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಿದೆ.

Read More
Next Story