NEET PG 2026 ಫಲಿತಾಂಶ ಪ್ರಕಟ: ಅಕ್ಟೋಬರ್ 1ರಿಂದ ಲಾಗಿನ್‌ನಲ್ಲಿ ಕೀ ಉತ್ತರ ಲಭ್ಯ
x

NEET PG 2026ರ ವೈಯಕ್ತಿಕ ಸ್ಕೋರ್‌ಕಾರ್ಡ್‌ಗಳನ್ನು ಅಕ್ಟೋಬರ್ 1, 2026ರಿಂದ NBEMS ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

NEET PG 2026 ಫಲಿತಾಂಶ ಪ್ರಕಟ: ಅಕ್ಟೋಬರ್ 1ರಿಂದ ಲಾಗಿನ್‌ನಲ್ಲಿ ಕೀ ಉತ್ತರ ಲಭ್ಯ

NEET PG 2026ರ ವೈಯಕ್ತಿಕ ಸ್ಕೋರ್‌ಕಾರ್ಡ್‌ಗಳನ್ನು ಅಕ್ಟೋಬರ್ 1, 2026ರಿಂದ NBEMS ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.


Click the Play button to hear this message in audio format

ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿಯು (NBEMS) NEET PG 2026 ಪರೀಕ್ಷೆಯ ಫಲಿತಾಂಶವನ್ನು ಸೆಪ್ಟೆಂಬರ್ 24ರಂದು ಅಧಿಕೃತವಾಗಿ ಪ್ರಕಟಿಸಿದೆ. ಆಗಸ್ಟ್ 30ರಂದು ನಡೆದಿದ್ದ ಈ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ತಮ್ಮ ಫಲಿತಾಂಶ ಮತ್ತು ರ‍್ಯಾಂಕ್ ವಿವರಗಳನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದಾಗಿದೆ. ಜೈಪುರದ ಎರಡು ಕೇಂದ್ರಗಳಲ್ಲಿ ಕೆಲವು ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಿದ ಬಳಿಕ ಇದೀಗ ಸಂಪೂರ್ಣ ಮೌಲ್ಯಮಾಪನ ಮುಗಿಸಿ ಫಲಿತಾಂಶ ಹೊರಹಾಕಲಾಗಿದೆ.

ಅಭ್ಯರ್ಥಿಗಳು nbe.edu.in, natboard.edu.in ಮತ್ತು cdn3.digialm.com ಜಾಲತಾಣಗಳಲ್ಲಿ ತಮ್ಮ ಅರ್ಜಿ ಸಂಖ್ಯೆ ಹಾಗೂ ಜನ್ಮ ದಿನಾಂಕದ ಮೂಲಕ ಪ್ರವೇಶ ಪಡೆದು ಅಂಕಪಟ್ಟಿಯನ್ನು ಪಡೆಯಬಹುದು.

ಅಂಕಪಟ್ಟಿ ಪಡೆಯುವುದು ಹೇಗೆ?

ಮೊದಲು ಎನ್‌ಬಿಇಎಂಎಸ್‌ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ಬಳಿಕ ನೀಟ್‌ ಪಿಜಿ ಅಂಕಪಟ್ಟಿಯ ಕೊಂಡಿಯನ್ನು ಆಯ್ಕೆ ಮಾಡಬೇಕು. ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಪ್ರವೇಶ ಪಡೆದ ನಂತರ ಪರದೆಯ ಮೇಲೆ ಅಂಕಪಟ್ಟಿ ಕಾಣಿಸುತ್ತದೆ. ಅದನ್ನು ಜಾಲತಾಣದಿಂದ ಇಳಿಸಿಕೊಂಡು ಭವಿಷ್ಯದ ಬಳಕೆಗಾಗಿ ಮುದ್ರಣ ಪ್ರತಿಯನ್ನು ತೆಗೆದುಕೊಳ್ಳಬಹುದು.

ಉತ್ತರ ಪತ್ರಿಕೆ ಯಾವಾಗ?

ಎನ್‌ಬಿಇಎಂಎಸ್‌ ಮಾಹಿತಿ ಪ್ರಕಾರ, ನೀಟ್‌ ಪಿಜಿ 2026ರ ಉತ್ತರ ಪತ್ರಿಕೆ ಅಕ್ಟೋಬರ್‌ 1 ಅಥವಾ ಅದರ ನಂತರ ಬಿಡುಗಡೆಯಾಗಲಿದೆ. ಪ್ರಶ್ನೆ ಸಂಖ್ಯೆಗಳು, ಅಭ್ಯರ್ಥಿಗಳು ಗುರುತಿಸಿದ ಉತ್ತರಗಳು ಹಾಗೂ ಮೌಲ್ಯಮಾಪನದ ಪ್ರಕಾರ ಪ್ರತಿ ಪ್ರಶ್ನೆಗೆ ನೀಡಲಾದ ಅಂಕಗಳ ವಿವರಗಳನ್ನೂ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಅರ್ಜಿದಾರರ ಪ್ರವೇಶ ಖಾತೆಯ ಮೂಲಕ ಉತ್ತರ ಪತ್ರಿಕೆಯನ್ನು ಪರಿಶೀಲಿಸಬಹುದು.

ಆಗಸ್ಟ್‌ 30ರಂದು ಪರೀಕ್ಷೆ

ನೀಟ್‌ ಪಿಜಿ 2026 ಪರೀಕ್ಷೆಯನ್ನು ಆಗಸ್ಟ್‌ 30ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ಒಂದೇ ಅವಧಿಯಲ್ಲಿ ನಡೆಸಲಾಗಿತ್ತು. ದೇಶದ 339 ನಗರಗಳ 1,111 ಪರೀಕ್ಷಾ ಕೇಂದ್ರಗಳಲ್ಲಿ ಗಣಕ ಆಧಾರಿತ ಪರೀಕ್ಷಾ ಮಾದರಿಯಲ್ಲಿ ಪರೀಕ್ಷೆ ನಡೆದಿತ್ತು. ಒಟ್ಟು 2,63,535 ಅಭ್ಯರ್ಥಿಗಳು ಪರೀಕ್ಷೆ ಪೂರ್ಣಗೊಳಿಸಿದ್ದರು. ಆದರೆ ಜೈಪುರದ ಸಿತಾಪುರದಲ್ಲಿರುವ ಐಒನ್ ಡಿಜಿಟಲ್ ಝೋನ್ ಪರೀಕ್ಷಾ ಕೇಂದ್ರಗಳಲ್ಲಿ ತಾಂತ್ರಿಕ ದೋಷದಿಂದ ಕೆಲವು ಅಭ್ಯರ್ಥಿಗಳಿಗೆ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಣಾಮಕ್ಕೊಳಗಾದ 2,445 ಅಭ್ಯರ್ಥಿಗಳಿಗೆ ಸೆಪ್ಟೆಂಬರ್‌ 5ರಂದು ಮರುಪರೀಕ್ಷೆ ನಡೆಸಲಾಗಿತ್ತು.

Read More
Next Story