Registration for Second PUC Exam-2 begins; Failed candidates will be allowed to write the exam for free!
x

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)

ದ್ವಿತೀಯ ಪಿಯುಸಿ ಪರೀಕ್ಷೆ-2 ನೋಂದಣಿ ಆರಂಭ; ಫೇಲ್‌ ಆದವರು ಉಚಿತವಾಗಿ ಪರೀಕ್ಷೆ ಬರೆಯಲು ಅವಕಾಶ!

ಕಾರಣಾಂತರಗಳಿಂದ ಮೊದಲ ಪರೀಕ್ಷೆಗೆ ಗೈರುಹಾಜರಾದ ಅಥವಾ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳನ್ನು ತಮ್ಮ ಕಾಲೇಜಿನ ಲಾಗಿನ್ ಮುಖಾಂತರ ನೋಂದಣಿ ಮಾಡಲು ಪ್ರಾಂಶುಪಾಲರಿಗೆ ಅವಕಾಶ ನೀಡಲಾಗಿದೆ.


Click the Play button to hear this message in audio format

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಸಂಬಂಧಿಸಿದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಹತ್ವದ ಪ್ರಕಟಣೆ ಹೊರಡಿಸಿದೆ.

ಮೊದಲ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಎರಡನೇ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಏ. 9ರಿಂದ ಅವಕಾಶ ಕಲ್ಪಿಸಿದ್ದು, ಏ.17 ಕೊನೆಯ ದಿನವಾಗಿದೆ.

ವಿದ್ಯಾರ್ಥಿಗಳು ಏ.17ರ ಒಳಗೆ ಪರೀಕ್ಷೆ-2ಕ್ಕೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಆಸಕ್ತ ಅಭ್ಯರ್ಥಿಗಳು ಮಂಡಲಿಯ ಅಧಿಕೃತ ಪೋರ್ಟಲ್ ಅಥವಾ ನೀಡಲಾಗಿರುವ ಲಿಂಕ್ ಮೂಲಕ ನೇರವಾಗಿ ನೋಂದಾಯಿಸಿಕೊಳ್ಳಬಹುದು. ಇಲ್ಲವೇ ತಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ 'PU EXAM PORTAL' ಮೂಲಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ಉಚಿತ ನೋಂದಣಿಗೆ ಅವಕಾಶ

2026ರಲ್ಲಿ ಮೊದಲ ಬಾರಿಗೆ ರೆಗ್ಯುಲರ್ ವಿದ್ಯಾರ್ಥಿಗಳಾಗಿ (Regular Fresh) ನೋಂದಾಯಿಸಿಕೊಂಡು, ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದ (Not Completed) ವಿದ್ಯಾರ್ಥಿಗಳಿಗೆ ಮಂಡಲಿಯು ಸಿಹಿ ಸುದ್ದಿ ನೀಡಿದ್ದು, ಇಂತಹ ವಿದ್ಯಾರ್ಥಿಗಳು ಯಾವುದೇ ಪರೀಕ್ಷಾ ಶುಲ್ಕ ಪಾವತಿಸದೆ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹೊರಡಿಸಿರುವ ಪ್ರಕಟಣೆ

ಪ್ರಾಂಶುಪಾಲರಿಗೆ ಸೂಚನೆ

ಕಾರಣಾಂತರಗಳಿಂದ ಮೊದಲ ಪರೀಕ್ಷೆಗೆ ಗೈರುಹಾಜರಾದ ಅಥವಾ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳನ್ನು ತಮ್ಮ ಕಾಲೇಜಿನ ಲಾಗಿನ್ ಮುಖಾಂತರ ನೋಂದಣಿ ಮಾಡಲು ಪ್ರಾಂಶುಪಾಲರಿಗೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಪರೀಕ್ಷೆಗೆ ಸಿದ್ಧಪಡಿಸುವಂತೆ ಮಂಡಳಿ ತಿಳಿಸಿದೆ.

ಪರೀಕ್ಷಾ ದಿನಾಂಕ ಪ್ರಕಟ

ದ್ವಿತೀಯ ಪಿಯುಸಿ ಪರೀಕ್ಷೆ-2ರ ದಿನಾಂಕಗಳನ್ನು ಮರುನಿಗದಿಪಡಿಸಲಾಗಿದ್ದು, ಏ. 30 ರಿಂದ ಪರೀಕ್ಷೆಗಳು ಆರಂಭವಾಗಲಿವೆ. ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ನಿಗದಿತ ಸಮಯದಲ್ಲಿ ಆಯಾ ಕಾಲೇಜಿನ ಪ್ರಾಂಶುಪಾಲರ ಲಾಗಿನ್‌ಗೆ ಕಳುಹಿಸಲಾಗುವುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಂಡಳಿಯ ಜಾಲತಾಣದಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿದೆ. ಯಾವುದೇ ಆತಂಕವಿಲ್ಲದೆ, ಶಾಂತಚಿತ್ತದಿಂದ ಪರೀಕ್ಷೆಗೆ ಸಿದ್ಧತೆ ನಡೆಸಿ ಹಾಜರಾಗುವಂತೆ ಮಂಡಳಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More
Next Story