23 ವರ್ಷಗಳ ಹಳೆಯ ರಿಂಗ್ ರೋಡ್ ಶುಭಾ ಪ್ರಕರಣಕ್ಕೆ ಟ್ವಿಸ್ಟ್- ಕ್ಷಮೆ ನೀಡಲು ಸರ್ಕಾರ ನಕಾರ
2003ರಲ್ಲಿ ನಡೆದ ಬಿ.ವಿ. ಗಿರೀಶ್ ಕೊಲೆ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಬಿ.ವಿ. ಗಿರೀಶ್ ಅವರನ್ನು ಅವರ ನಿಶ್ಚಿತಾರ್ಥದ ಹುಡುಗಿ ಶುಭಾ ಮತ್ತು ಆಕೆಯ ಪ್ರಿಯಕರ ಅರುಣ್ ವರ್ಮ ಹಾಗೂ ಇತರರು ಸೇರಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದರು.
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ 2003ರ ಬಹುಚರ್ಚಿತ ರಿಂಗ್ ರೋಡ್ ಶುಭಾ ಪ್ರಕರಣದ ಅಪರಾಧಿಗಳಿಗೆ ಹಿನ್ನಡೆಯಾಗಿದೆ. ಈ ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಕ್ಷಮಾಧಾನ ಅರ್ಜಿಯನ್ನು ರಾಜ್ಯ ಸಚಿವ ಸಂಪುಟ ಸಭೆಯು ತಿರಸ್ಕರಿಸಿದೆ.
2003ರಲ್ಲಿ ನಡೆದ ಬಿ.ವಿ. ಗಿರೀಶ್ ಕೊಲೆ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಬಿ.ವಿ. ಗಿರೀಶ್ ಅವರನ್ನು ಅವರ ನಿಶ್ಚಿತಾರ್ಥದ ಹುಡುಗಿ ಶುಭಾ ಮತ್ತು ಆಕೆಯ ಪ್ರಿಯಕರ ಅರುಣ್ ವರ್ಮ ಹಾಗೂ ಇತರರು ಸೇರಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಾದ ಶುಭಾ, ಅರುಣ್ ವರ್ಮ ಮತ್ತು ವೆಂಕಟೇಶ್ ಅವರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಸುದೀರ್ಘ ಕಾಲ ಜೈಲುವಾಸ ಅನುಭವಿಸಿರುವ ಈ ಅಪರಾಧಿಗಳು, ತಮ್ಮ ಶಿಕ್ಷೆಯನ್ನು ಮನ್ನಾ ಮಾಡುವಂತೆ ಅಥವಾ ಕಡಿಮೆ ಮಾಡುವಂತೆ ಕೋರಿ ಸರ್ಕಾರಕ್ಕೆ ಕ್ಷಮಾಧಾನ ಅರ್ಜಿ ಸಲ್ಲಿಸಿದ್ದರು.
Next Story

