ಎಸ್‌ಬಿಐ ಡೇಡಾಗೆ ಸೈಬರ್ ಕಳ್ಳರ ಕನ್ನ, 3.75 ಲಕ್ಷ ದಾಖಲೆ ಸೋರಿಕೆ? ಗ್ರಾಹಕರ ಆತಂಕ
ಎಸ್‌ಬಿಐ ಗ್ರಾಹಕರ ದತ್ತಾಂಶ ಸೋರಿಕೆ ಶಂಕೆ.ಡಾರ್ಕ್ ವೆಬ್‌ನಲ್ಲಿ 3.75 ಲಕ್ಷ ದಾಖಲೆ ಪತ್ತೆ, 3,897 ಗ್ರಾಹಕರ ವೈಯಕ್ತಿಕ ಗುರುತಿನ ಮಾಹಿತಿಯೂ ಸೇರಿದೆ ಎಂಬ ವರದಿ.
ಎಸ್‌ಬಿಐ ಗ್ರಾಹಕರೇ ಎಚ್ಚರ! ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರ ದತ್ತಾಂಶ ಡಾರ್ಕ್ ವೆಬ್‌ನಲ್ಲಿ ಲಭ್ಯವಿರುವ ಶಂಕೆ ವ್ಯಕ್ತವಾಗಿದೆ. ಗ್ರಾಹಕರ ಮಾಹಿತಿ ಸೋರಿಕೆಯಾಗಿರುವ ಕುರಿತು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡವಾದ ಸಿಇಆರ್‌ಟಿ-ಇನ್‌ನಿಂದ ಮಾಹಿತಿ ಸ್ವೀಕರಿಸಿರುವುದಾಗಿ ಎಸ್‌ಬಿಐ ತಿಳಿಸಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ ಡಾರ್ಕ್ ವೆಬ್‌ನಲ್ಲಿ ಸುಮಾರು 3.75 ಲಕ್ಷ ದಾಖಲೆಗಳು ಲಭ್ಯವಿರುವುದು ಪತ್ತೆಯಾಗಿದೆ. ಇವುಗಳಲ್ಲಿ 3,897 ಗ್ರಾಹಕರ ವೈಯಕ್ತಿಕ ಗುರುತಿನ ಮಾಹಿತಿಗೆ ಸಂಬಂಧಿಸಿದ ದಾಖಲೆಗಳೂ ಸೇರಿವೆ ಎಂದು ವರದಿಯಾಗಿದೆ.
Next Story

