ಲಾರಿ ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ: ನಾಲ್ವರ ದುರ್ಮರಣ, ಹಲವರಿಗೆ ಗಾಯ
x
ಹಲವು ವಾಹನಗಳಿಗೆ ಗುದ್ದಿ ಪಲ್ಟಿಯಾಗಿ ಬಿದ್ದಿರುವ ಲಾರಿ.

ಲಾರಿ ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ: ನಾಲ್ವರ ದುರ್ಮರಣ, ಹಲವರಿಗೆ ಗಾಯ

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬೆಳ್ಳುಳ್ಳಿ ತುಂಬಿಕೊಂಡು ಅತಿವೇಗವಾಗಿ ಬರುತ್ತಿದ್ದ ಲಾರಿ ಹೊಸಪೇಟೆ ಹೊರವಲಯದ ಟನಲ್‌ನಿಂದ ಡಣಾಪುರದವರೆಗೆ ಎದುರಿಗೆ ಸಿಕ್ಕ ವಾಹನಗಳನ್ನೆಲ್ಲಾ ಗುದ್ದಿಕೊಂಡು ಹೋಗಿದೆ.


Click the Play button to hear this message in audio format

ಲಾರಿ ಚಾಲಕನ ಅಜಾಗರೂಕತೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ.

ಹೊಸಪೇಟೆ ತಾಲೂಕಿನ ಡಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ (NH-50) ಈ ಅಪಘಾತ ಸಂಭವಿಸಿದೆ. ಬೆಳ್ಳುಳ್ಳಿ ತುಂಬಿಕೊಂಡು ಅತಿವೇಗವಾಗಿ ಬರುತ್ತಿದ್ದ ಲಾರಿಯೊಂದು ಹೊಸಪೇಟೆ ಹೊರವಲಯದ ಟನಲ್‌ನಿಂದ ಡಣಾಪುರದವರೆಗೆ ಎದುರಿಗೆ ಸಿಕ್ಕ ವಾಹನಗಳನ್ನೆಲ್ಲಾ ಗುದ್ದಿಕೊಂಡು ಹೋಗಿದೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿಯು ಕಾರು, ಬೈಕ್ ಹಾಗೂ ಬಸ್‌ಗೆ ಒಂದರ ಹಿಂದೊಂದರಂತೆ ಡಿಕ್ಕಿ ಹೊಡೆದು ಸರಣಿ ಅಪಘಾತಕ್ಕೆ ಕಾರಣವಾಗಿದೆ.

ಅಪಘಾತದ ರಭಸಕ್ಕೆ ಕಾರೊಂದು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ಅದಲ್ಲಿದ್ದವರು ಸೇರಿದಂತೆ ಒಟ್ಟು ನಾಲ್ವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಜೊತೆಗೆ ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರು ಸೇರಿದಂತೆ ಐದಾರು ಮಂದಿಗೆ ಗಂಭೀರ ಗಾಯಗಳಾಗಿವೆ.

ಆಸ್ಪತ್ರೆಗೆ ದಾಖಲು, ಪೊಲೀಸರ ಭೇಟಿ

ಅಪಘಾತದ ಮಾಹಿತಿ ತಿಳಿದ ತಕ್ಷಣ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಾಹ್ನವಿ ಎಸ್. ಹಾಗೂ ಮರಿಯಮ್ಮನಹಳ್ಳಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಗಾಯಾಳುಗಳನ್ನು ತಕ್ಷಣ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Read More
Next Story