1 ಕೋಟಿ ರೂ. ಲಂಚಕ್ಕೆ ಬೇಡಿಕೆ; 50 ಲಕ್ಷ ರೂ. ಮುಂಗಡ ಪಡೆಯುವಾಗ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ
x

ಧಾರವಾಡದಲ್ಲಿ 1 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್, ಮೊದಲ ಕಂತಿನ 50 ಲಕ್ಷ ರೂ. ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

1 ಕೋಟಿ ರೂ. ಲಂಚಕ್ಕೆ ಬೇಡಿಕೆ; 50 ಲಕ್ಷ ರೂ. ಮುಂಗಡ ಪಡೆಯುವಾಗ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೀಡಿದ ಮಾಹಿತಿಯಂತೆ, ಬಾಗಲಕೋಟೆ ಮೂಲದ ಸಚ್ಚಿದಾನಂದ ಕುಚನೂರ್ ಯರಿಕೊಪ್ಪದಲ್ಲಿ ಸುಮಾರು 33 ಎಕರೆ ಜಮೀನು ಖರೀದಿಸಿದ್ದರು. ಮುಂದಿನ ಹಂತದಲ್ಲಿ ಇನ್ನಷ್ಟು ಜಮೀನು ಖರೀದಿಸುವ ಉದ್ದೇಶವೂ ಇತ್ತು ಎನ್ನಲಾಗಿದೆ.


Click the Play button to hear this message in audio format

ಭೂಮಿಯ ದಾಖಲೆಗಳನ್ನು ಸರಿಪಡಿಸುವ ಕೆಲಸಕ್ಕಾಗಿ 1 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಧಾರವಾಡದ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚದ ಮೊದಲ ಕಂತಿನ 50 ಲಕ್ಷ ರೂ. ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಧಾರವಾಡ ತಾಲೂಕಿನ ಯರಿಕೊಪ್ಪದ ಬಳಿ ಭೂಮಿ ಖರೀದಿಸಿದ್ದ ಮುಧೋಳ ಮೂಲದ ಪರಮೇಶ್ವರ ಅಂಗಡಿ ಅವರು ಜಮೀನನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದರು. ಈ ಸಂಬಂಧ ಭೂಮಿಯ ದಾಖಲೆಗಳನ್ನು ಸರಿಪಡಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಈ ಕೆಲಸವನ್ನು ಮಾಡಿಕೊಡಲು ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ 1 ಕೋಟಿ ರೂ. ನಗದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ಒಂದು ಎಕರೆ ಜಮೀನು ನೀಡುವಂತೆಯೂ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

50 ಲಕ್ಷ ರೂ. ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸೆರೆ

ತಹಶೀಲ್ದಾರ್ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದರು. ಮೊದಲ ಕಂತಾಗಿ 50 ಲಕ್ಷ ರೂ. ನೀಡಲು ದೂರುದಾರರು ಒಪ್ಪಿಕೊಂಡಿದ್ದರು.

ಬುಧವಾರ ರಾತ್ರಿ ಸುಮಾರು 9.30ರ ವೇಳೆಗೆ ಕೆಸಿಡಿ ಸಮೀಪ ಹಣದ ವ್ಯವಹಾರ ನಡೆದಿದೆ. ದೂರುದಾರರು ತಮ್ಮ ಬ್ಯಾಗ್‌ನಲ್ಲಿದ್ದ 50 ಲಕ್ಷ ರೂ. ಹಣವನ್ನು ತಹಶೀಲ್ದಾರ್ ಅವರ ಬ್ಯಾಗ್‌ಗೆ ಹಾಕಿದ ಬಳಿಕ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಸಚ್ಚಿದಾನಂದ ಕುಚನೂರ್ ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ.

50 ಲಕ್ಷ ರೂ. ನಗದು ವಶ

ಲೋಕಾಯುಕ್ತ ಅಧಿಕಾರಿಗಳು ತಹಶೀಲ್ದಾರ್ ಬಳಿಯಿಂದ 50 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಹಣದ ಬಂಡಲ್‌ಗಳನ್ನು ಅಧಿಕಾರಿಗಳು ಪರಿಶೀಲಿಸಿ ಲೆಕ್ಕ ಹಾಕಿದ್ದಾರೆ. ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲೇ ತಹಶೀಲ್ದಾರ್ ಸಿಕ್ಕಿಬಿದ್ದಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

33 ಎಕರೆ ಜಮೀನಿಗೆ ಸಂಬಂಧಿಸಿದ ಪ್ರಕರಣ

ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ನೀಡಿದ ಮಾಹಿತಿಯಂತೆ, ಬಾಗಲಕೋಟೆ ಮೂಲದ ಡೆವಲಪರ್‌ ಯರಿಕೊಪ್ಪದಲ್ಲಿ ಸುಮಾರು 33 ಎಕರೆ ಜಮೀನು ಖರೀದಿಸಿದ್ದರು. ಮುಂದಿನ ಹಂತದಲ್ಲಿ ಇನ್ನಷ್ಟು ಜಮೀನು ಖರೀದಿಸುವ ಉದ್ದೇಶವೂ ಇತ್ತು ಎನ್ನಲಾಗಿದೆ.

ಜಮೀನಿನ ಖರಾಬು ಮತ್ತು ಸಾಗುವಳಿ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸುವ ಸಂಬಂಧ ಅಧಿಕಾರಿಗಳ ಮಟ್ಟದಲ್ಲಿ ಪ್ರಕ್ರಿಯೆ ನಡೆದಿತ್ತು. ಈ ವಿಚಾರದಲ್ಲಿ ಎಡಿಎಲ್‌ಆರ್‌ ಅವರು ಈ ಹಿಂದೆ ಮಾಡಿದ್ದ ಪೋಡಿ ಆದೇಶವನ್ನು ರದ್ದುಪಡಿಸಿದ್ದರು. ಬಳಿಕ ಖರಾಬು ಮತ್ತು ಸಾಗುವಳಿ ಜಾಗದ ವಿವರಗಳ ಕುರಿತು ತಹಶೀಲ್ದಾರ್‌ಗೆ ಪ್ರಸ್ತಾವನೆ ಕಳುಹಿಸಲಾಗಿತ್ತು.

ಈ ಪ್ರಕ್ರಿಯೆಯನ್ನು ಮುಂದುವರಿಸಿ ಕೆಲಸ ಮಾಡಿಕೊಡಲು ತಹಶೀಲ್ದಾರ್ 1 ಕೋಟಿ ರೂ. ಹಣದ ಜೊತೆಗೆ ಒಂದು ಎಕರೆ ಜಮೀನು ಕೇಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರು ಆಧರಿಸಿ ಲೋಕಾಯುಕ್ತ ಕಾರ್ಯಾಚರಣೆ

ಲಂಚದ ಬೇಡಿಕೆ ಕುರಿತು ದೂರುದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ಆಧರಿಸಿ ಅಧಿಕಾರಿಗಳು ಕಾರ್ಯಾಚರಣೆಯ ರೂಪುರೇಷೆ ಸಿದ್ಧಪಡಿಸಿದ್ದರು. ಹಣ ಸ್ವೀಕರಿಸುವ ಸ್ಥಳ ಮತ್ತು ಸಮಯವನ್ನು ಖಚಿತಪಡಿಸಿಕೊಂಡ ಬಳಿಕ ದಾಳಿ ನಡೆಸಲಾಗಿದೆ. ಸದ್ಯ ಸಚ್ಚಿದಾನಂದ ಕುಚನೂರ್ ಅವರನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

Read More
Next Story