ನಕಲಿ ದಾಖಲೆ ಸೃಷ್ಟಿಸಿ ಕಾರುಗಳ ಮಾರಾಟ: ಮೂವರನ್ನು ಬಂಧಿಸಿದ ವಿಲ್ಸನ್ ಗಾರ್ಡನ್ ಪೊಲೀಸರು
x

ಕೊಪ್ಪಳದಲ್ಲಿ ವಿಮೆ ಹಣದ ಆಸೆ ಮತ್ತು ಸಾಲದ ಹೊರೆ ಹಿನ್ನೆಲೆ ಪತಿಯ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಪತ್ನಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. 

ನಕಲಿ ದಾಖಲೆ ಸೃಷ್ಟಿಸಿ ಕಾರುಗಳ ಮಾರಾಟ: ಮೂವರನ್ನು ಬಂಧಿಸಿದ ವಿಲ್ಸನ್ ಗಾರ್ಡನ್ ಪೊಲೀಸರು

ತನಿಖೆ ವೇಳೆ ನಕಲಿ ಆರ್‌ಸಿ ತಯಾರಿಸಲು ಬಳಸುತ್ತಿದ್ದ ಯಂತ್ರ, ಸರ್ಕಾರಿ ಅಧಿಕಾರಿಗಳು ಮತ್ತು ಕಚೇರಿಗಳ ನಕಲಿ ಮುದ್ರೆಗಳು, ಸ್ಟಾಂಪ್ ಪೇಪರ್‌ಗಳು, ಕಂಪ್ಯೂಟರ್ ಹಾಗೂ ಪ್ರಿಂಟರ್ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


Click the Play button to hear this message in audio format

ವಾಹನಗಳ ನಕಲಿ ದಾಖಲೆ ಸೃಷ್ಟಿಸಿ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಬೆಂಗಳೂರು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 2 ಕೋಟಿ ರೂ. ಮೌಲ್ಯದ 10 ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಸಾಲ ಬಾಕಿ ಇರುವ ವಾಹನಗಳನ್ನು ಪಡೆದುಕೊಂಡು, ಸಾಲ ತೀರಿಸಿರುವಂತೆ ತೋರಿಸಲು ನಕಲಿ ಬ್ಯಾಂಕ್ ಎನ್‌ಒಸಿ ಸಿದ್ಧಪಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ನಕಲಿ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ಸರ್ಕಾರಿ ಕಚೇರಿಗಳ ಮುದ್ರೆಗಳನ್ನು ಬಳಸಿ ವಾಹನಗಳನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ತನಿಖೆ ವೇಳೆ ನಕಲಿ ಆರ್‌ಸಿ ತಯಾರಿಸಲು ಬಳಸುತ್ತಿದ್ದ ಯಂತ್ರ, ಸರ್ಕಾರಿ ಅಧಿಕಾರಿಗಳು ಮತ್ತು ಕಚೇರಿಗಳ ನಕಲಿ ಮುದ್ರೆಗಳು, ಸ್ಟಾಂಪ್ ಪೇಪರ್‌ಗಳು, ಕಂಪ್ಯೂಟರ್ ಹಾಗೂ ಪ್ರಿಂಟರ್ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 3ರಂದು ದೂರು ದಾಖಲಾಗಿತ್ತು. ಕಾರು ಮಾರಾಟಗಾರನೊಬ್ಬ ಎಸ್‌ಯುವಿ ಮಾರಾಟಕ್ಕಿದೆ ಎಂದು ತಿಳಿಸಿ ದೂರುದಾರರಿಂದ 20,000 ರೂ. ಮುಂಗಡ ಪಡೆದಿದ್ದ. ಬಳಿಕ ವಾಹನವನ್ನು ವಿಲ್ಸನ್ ಗಾರ್ಡನ್ ಪಾರ್ಕ್ ಬಳಿ ಹಸ್ತಾಂತರಿಸಲಾಗಿತ್ತು. ದಾಖಲೆ ಪರಿಶೀಲಿಸಿದಾಗ ಆರ್‌ಸಿ ನಕಲಿ ಎಂಬುದು ಗೊತ್ತಾಗಿ ದೂರು ನೀಡಲಾಗಿತ್ತು.

ತನಿಖೆ ಮುಂದುವರಿಸಿರುವ ಪೊಲೀಸರು ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಮುಖ ಕಾರು ಡೀಲರ್ ಸೇರಿದಂತೆ ಕೆಲವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Read More
Next Story