Police arrive within minutes of call; man rescued by tying kidnappers hoods
x

ಸಾಂದರ್ಭಿಕ ಚಿತ್ರ

ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಪ್ರತ್ಯಕ್ಷ; ಅಪಹರಣಕಾರರ ಹೆಡೆಮುರಿ ಕಟ್ಟಿ ವ್ಯಕ್ತಿಯ ರಕ್ಷಣೆ

ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ, ಪೊಲೀಸರ ಕಾರ್ಯವೈಖರಿ ಜನಮೆಚ್ಚುಗೆ ಗಳಿಸಿದೆ. ಜನವರಿ 30ರ ರಾತ್ರಿ 9.28 ರ ಸುಮಾರಿಗೆ ಬಾರ್ ಒಂದರ ಬಳಿ ವ್ಯಕ್ತಿಯೊಬ್ಬರ ಮೊಬೈಲ್ ಕಳ್ಳತನವಾಗಿತ್ತು.


Click the Play button to hear this message in audio format

ಬೆಂಗಳೂರು ನಗರದಲ್ಲಿ ಪೊಲೀಸರ ಕಾರ್ಯಕ್ಷಮತೆ ಮತ್ತು 'ನಮ್ಮ 112' ಸಹಾಯವಾಣಿಯ ತ್ವರಿತ ಸ್ಪಂದನೆಗೆ ಎರಡು ಪ್ರತ್ಯೇಕ ಘಟನೆಗಳು ಸಾಕ್ಷಿಯಾಗಿವೆ. ಒಂದೆಡೆ ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ರಕ್ಷಿಸಿದರೆ, ಮತ್ತೊಂದೆಡೆ ಕಳವಾದ ಮೊಬೈಲ್ ಅನ್ನು ಕೇವಲ 10 ನಿಮಿಷಗಳಲ್ಲಿ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಲಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಎರಡೂ ಯಶಸ್ವಿ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಅಪಹರಣಕಾರರ ಬಂಧನ

ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 30 ರಂದು ನಡೆದ ಘಟನೆ ಇದು. ರಾತ್ರಿ ಸುಮಾರು 10.43ರ ಸಮಯದಲ್ಲಿ ವ್ಯಕ್ತಿಯೊಬ್ಬರು 'ನಮ್ಮ 112' ಗೆ ಕರೆ ಮಾಡಿ ಆತಂಕಕಾರಿ ವಿಷಯವೊಂದನ್ನು ತಿಳಿಸಿದದಾರೆ. ಬೊಮ್ಮಸಂದ್ರದ ಕೈಗಾರಿಕಾ ಪ್ರದೇಶದಲ್ಲಿ ತಮ್ಮ ಹಿರಿಯ ಸಹೋದರನನ್ನು ಅಪರಿಚಿತರು ಆಟೋರಿಕ್ಷಾದಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ ಎಂಬುದು ಆ ಕರೆಯಾಗಿತ್ತು. ಮಾಹಿತಿ ಸಿಕ್ಕ ತಕ್ಷಣವೇ ಎಚ್ಚೆತ್ತುಕೊಂಡ 'ನಮ್ಮ 112' ಸಿಬ್ಬಂದಿ, ಕೂಡಲೇ ಕರ್ತವ್ಯದಲ್ಲಿದ್ದ ಹೊಯ್ಸಳ-08 ವಾಹನಕ್ಕೆ ಮಾಹಿತಿ ರವಾನಿಸಿದ್ದಾರೆ. ಎ.ಎಸ್.ಐ ಲಿಂಗಪ್ಪ ಹಾಗೂ ಪಿಸಿ ಬಂದೇನವಾಜ್ ಅವರಿದ್ದ ತಂಡ, ಕೇವಲ 19 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದೆ. ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಂಶಯಾಸ್ಪದ ಆಟೋವನ್ನು ತಡೆದು ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಅಪಹರಣಕಾರರ ಬಳಿಯಿದ್ದ ಆಯುಧಗಳನ್ನು ವಶಪಡಿಸಿಕೊಂಡು, ಅಪಹರಣಕ್ಕೊಳಗಾಗಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮಕ್ಕಾಗಿ ಹೆಬ್ಬಗೋಡಿ ಠಾಣೆಗೆ ಹಸ್ತಾಂತರಿಸಲಾಗಿದೆ.

ಕೇವಲ 10 ನಿಮಿಷಗಳಲ್ಲಿ ಮೊಬೈಲ್ ಪತ್ತೆ!

ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ, ಪೊಲೀಸರ ಕಾರ್ಯವೈಖರಿ ಜನಮೆಚ್ಚುಗೆ ಗಳಿಸಿದೆ. ಜನವರಿ 30ರ ರಾತ್ರಿ 9.28 ರ ಸುಮಾರಿಗೆ ಬಾರ್ ಒಂದರ ಬಳಿ ವ್ಯಕ್ತಿಯೊಬ್ಬರ ಮೊಬೈಲ್ ಕಳ್ಳತನವಾಗಿತ್ತು. ಸಂತ್ರಸ್ತ ವ್ಯಕ್ತಿ ತಕ್ಷಣವೇ 'ನಮ್ಮ 112' ಗೆ ಕರೆ ಮಾಡಿ ದೂರು ನೀಡಿದ್ದರು.

ಮಾಹಿತಿ ಪಡೆದ ಹೊಯ್ಸಳ-86 ರ ಸಿಬ್ಬಂದಿಗಳಾದ ಎ.ಎಸ್.ಐ ರಾಮಕೃಷ್ಣ ಹಾಗೂ ಎ.ಪಿ.ಸಿ ಯಲ್ಲಲಿಂಗ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಘಟನಾ ಸ್ಥಳಕ್ಕೆ ಕೇವಲ 10 ನಿಮಿಷಗಳಲ್ಲಿ ತಲುಪಿದ ಅವರು, ಕಳವಾಗಿದ್ದ ಮೊಬೈಲ್ ಫೋನ್ ಅನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಬಳಿಕ ಅದನ್ನು ಮೂಲ ಮಾಲೀಕರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.



Read More
Next Story