ವಾಟ್ಸಾಪ್‌ನಲ್ಲಿ ಬಂದ ಮದುವೆ ಕಾರ್ಡ್ ಡೌನ್‌ಲೋಡ್ ಮಾಡಿ 5 ಲಕ್ಷ ಕಳೆದುಕೊಂಡ ಉದ್ಯಮಿ
x

ಬೆಂಗಳೂರಿನ ಉದ್ಯಮಿಯೊಬ್ಬರು ವಾಟ್ಸಾಪ್‌ನಲ್ಲಿ ಬಂದ ಮದುವೆ ಆಮಂತ್ರಣದ APK ಫೈಲ್ ಡೌನ್‌ಲೋಡ್ ಮಾಡಿ 5 ಲಕ್ಷ ರೂ. ಕಳೆದುಕೊಂಡಿದ್ದಾರೆ.

ವಾಟ್ಸಾಪ್‌ನಲ್ಲಿ ಬಂದ ಮದುವೆ ಕಾರ್ಡ್ ಡೌನ್‌ಲೋಡ್ ಮಾಡಿ 5 ಲಕ್ಷ ಕಳೆದುಕೊಂಡ ಉದ್ಯಮಿ

ಬೆಂಗಳೂರಿನ ಉದ್ಯಮಿಯೊಬ್ಬರು ವಾಟ್ಸಾಪ್‌ನಲ್ಲಿ ಬಂದ ಮದುವೆ ಆಮಂತ್ರಣದ APK ಫೈಲ್ ಡೌನ್‌ಲೋಡ್ ಮಾಡಿ 5 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸೈಬರ್ ವಂಚನೆಯ ಈ ಹೊಸ ಜಾಲದ ಬಗ್ಗೆ ಎಚ್ಚರದಿಂದಿರಿ.


Click the Play button to hear this message in audio format

ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚಕರು ಹೊಸ ಮಾದರಿಯ ಸ್ಕ್ಯಾಮ್‌ ಮೂಲಕ ಅಮಾಯಕರನ್ನು ಬಲೆಗೆ ಬೀಳಿಸುತ್ತಿದ್ದಾರೆ. ಇತ್ತೀಚೆಗೆ ನಗರದ ಉದ್ಯಮಿಯೊಬ್ಬರು ವಾಟ್ಸಾಪ್‌ನಲ್ಲಿ ಬಂದ ಮದುವೆಯ ಆಮಂತ್ರಣ ಪತ್ರಿಕೆಯ ಫೈಲ್ ಡೌನ್‌ಲೋಡ್ ಮಾಡಿ ಬರೋಬ್ಬರಿ 5 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ 42 ವರ್ಷದ ಉದ್ಯಮಿ ನೂರ್ ನಹಿದ್ ಖಾನ್ ಅವರಿಗೆ ಪರಿಚಯವಿಲ್ಲದ ನಂಬರ್‌ನಿಂದ ವಾಟ್ಸಾಪ್ ಸಂದೇಶವೊಂದು ಬಂದಿತ್ತು. ಆ ಸಂದೇಶದಲ್ಲಿ ಮದುವೆಗೆ ಪ್ರೀತಿಯ ಆಮಂತ್ರಣ ನೀಡುವ ಬರಹದೊಂದಿಗೆ ಕೆಳಗೆ ಒಂದು ಫೈಲ್ ಇತ್ತು. ಅದನ್ನು ಮದುವೆಯ ಇ-ಕಾರ್ಡ್ ಎಂದು ಭಾವಿಸಿದ ಖಾನ್, ವಿವರಗಳನ್ನು ತಿಳಿಯಲು ಆ ಫೈಲ್ ಮೇಲೆ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆದರೆ ಅದು ಫೋಟೋ ಅಥವಾ ಪಿಡಿಎಫ್ ಫೈಲ್ ಆಗಿರದೆ, ಒಂದು ಎಪಿಕೆ (APK) ಫೈಲ್ ಆಗಿತ್ತು. ಈ ಫೈಲ್ ಡೌನ್‌ಲೋಡ್ ಆದ ಬೆನ್ನಲ್ಲೇ ಅವರ ಫೋನ್‌ನಲ್ಲಿ ಸೈಬರ್ ಕಳ್ಳರು ರಹಸ್ಯವಾಗಿ ಆಪ್ ಒಂದನ್ನು ಇನ್‌ಸ್ಟಾಲ್ ಮಾಡಿದ್ದಾರೆ.

ಇದಾದ ಕೆಲವೇ ಗಂಟೆಗಳಲ್ಲಿ, ಅಂದರೆ ಏಪ್ರಿಲ್ 16 ರ ಮುಂಜಾನೆ ಕೇವಲ ಒಂಬತ್ತು ನಿಮಿಷಗಳ ಅಂತರದಲ್ಲಿ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 5,00,440 ರೂಪಾಯಿ ಹಣ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ಫೋನ್‌ನಲ್ಲಿದ್ದ ಯುಪಿಐ ಅಪ್ಲಿಕೇಶನ್‌ಗಳ ಮೇಲೆ ವಂಚಕರು ಹಿಡಿತ ಸಾಧಿಸಿ ಈ ಕೃತ್ಯ ಎಸಗಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪೊಲೀಸರ ಪ್ರಕಾರ, ಈ ಎಪಿಕೆ ಫೈಲ್ ಮೂಲಕ ವಂಚಕರು ಮೊಬೈಲ್‌ನ ಕ್ಯಾಮೆರಾ, ಸಂದೇಶಗಳು ಮತ್ತು ಬ್ಯಾಂಕ್ ಮಾಹಿತಿಯನ್ನು ಪ್ರವೇಶಿಸುವ ಅನುಮತಿಯನ್ನು ಪಡೆದುಕೊಳ್ಳುತ್ತಾರೆ. ಈ ಬಗ್ಗೆ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪರಿಚಿತರಿಂದ ಬರುವ ಇಂತಹ ಅನುಮಾನಾಸ್ಪದ ಫೈಲ್‌ಗಳ ಬಗ್ಗೆ ಎಚ್ಚರದಿಂದಿರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

Read More
Next Story