ಪ್ರಿಯಕರನಿಂದ ಕಾಲ್‌, ಮೆಸೇಜ್‌ ಇಲ್ಲ... ಎರಡು ಮಕ್ಕಳ ತಾಯಿ ಮನನೊಂದು  ನೇಣಿಗೆ ಶರಣು
x

ಪ್ರಿಯಕರನಿಂದ ಕಾಲ್‌, ಮೆಸೇಜ್‌ ಇಲ್ಲ... ಎರಡು ಮಕ್ಕಳ ತಾಯಿ ಮನನೊಂದು ನೇಣಿಗೆ ಶರಣು

ಆತ್ಮಹತ್ಯೆಗೂ ಮುನ್ನ ಮಹಿಳೆ ಪ್ರಿಯಕರನಿಗೆ ವಿಡಿಯೋ ಹಾಗೂ ಆಡಿಯೊ ಸಂದೇಶಗಳನ್ನು ಕಳುಹಿಸಿದ್ದಳು ಎನ್ನಲಾಗಿದೆ. ತನಗೆ ಕರೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ.


Click the Play button to hear this message in audio format

ಪ್ರಿಯಕರನಿಂದ ಕರೆ ಬಾರದಿರುವುದಕ್ಕೆ ಮನನೊಂದು ಎರಡು ಮಕ್ಕಳ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯ ಬಾಂಬೆ ಕಾಲೋನಿಯಲ್ಲಿ ನಡೆದಿದೆ. ಮೆಹಬೂಬ್ ಬಿ (27) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಅವರು ಪ್ರಿಯಕರನಿಗೆ ವಿಡಿಯೋ ಹಾಗೂ ಆಡಿಯೊ ಸಂದೇಶ ಕಳುಹಿಸಿದ್ದಳು ಎನ್ನಲಾಗಿದೆ.

ಪ್ರಿಯಕರ ಕರೆ ಮಾಡುತ್ತಿಲ್ಲ ಹಾಗೂ ಕರೆ ಮಾಡಿದಾಗಲೂ ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ಅವರು ಬೇಸರಗೊಂಡಿದ್ದರು ಎನ್ನಲಾಗಿದೆ. ಕರೆ ಮಾಡದಿದ್ದರೆ ತೀವ್ರ ನಿರ್ಧಾರ ತೆಗೆದುಕೊಳ್ಳುವುದಾಗಿ ಆಡಿಯೊ ಸಂದೇಶದಲ್ಲಿ ಎಚ್ಚರಿಕೆ ನೀಡಿದ್ದಳು ಎನ್ನಲಾಗಿದೆ.

ಮಹಿಳೆ ಯುವಕನೊಬ್ಬನೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಕಳೆದ ಕೆಲ ದಿನಗಳಿಂದ ಆತ ಕರೆ ಮಾಡದಿರುವುದು ಹಾಗೂ ಕರೆ ಸ್ವೀಕರಿಸದಿರುವುದು ಅವರಿಗೆ ಬೇಸರ ಉಂಟುಮಾಡಿತ್ತು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ತಿಳಿದು ನವನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

Read More
Next Story