ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ ಬರೋಬ್ಬರಿ 2,300 ಪಾಯಿಂಟ್ಸ್ ನೆಗೆದರೆ, ನಿಫ್ಟಿ 700 ಪಾಯಿಂಟ್ಸ್ ಏರಿಕೆಯೊಂದಿಗೆ ಹೂಡಿಕೆದಾರರ ಜೇಬು ತುಂಬಿಸಿದೆ.

Click the Play button to hear this message in audio format

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮಗೊಂಡ ಬೆನ್ನಲ್ಲೇ, ಸೋಮವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ಕಂಡುಬಂದಿದೆ. ಹೂಡಿಕೆದಾರರಲ್ಲಿ ಮೂಡಿದ ಹೊಸ ವಿಶ್ವಾಸದಿಂದಾಗಿ ಮಂಗಳವಾರ ಬೆಳಗ್ಗೆ ಷೇರು ಪೇಟೆ ವಹಿವಾಟು ಆರಂಭಿಸಿದಾಗ ಬಿಎಸ್‌ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಏರಿಕೆ ಕಂಡಿವೆ.

ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ ಬರೋಬ್ಬರಿ 2,300 ಪಾಯಿಂಟ್ಸ್ ನೆಗೆದರೆ, ನಿಫ್ಟಿ 700 ಪಾಯಿಂಟ್ಸ್ ಏರಿಕೆಯೊಂದಿಗೆ ಹೂಡಿಕೆದಾರರ ಜೇಬು ತುಂಬಿಸಿದೆ.

ಮಾರುಕಟ್ಟೆ ಪುಟಿದೇಳಲು ಕಾರಣವೇನು?

ಭಾರತೀಯ ಸರಕುಗಳ ಮೇಲಿನ ಆಮದು ಸುಂಕವನ್ನು ಅಮೆರಿಕ ಶೇ. 50 ರಿಂದ ಶೇ. 18ಕ್ಕೆ ಇಳಿಸಲು ಒಪ್ಪಿಗೆ ನೀಡಿರುವುದು ಮಾರುಕಟ್ಟೆಯ ಈ ಉತ್ಸಾಹಕ್ಕೆ ಮುಖ್ಯ ಕಾರಣ. ಕಳೆದ ಕೆಲವು ತಿಂಗಳುಗಳಿಂದ ಈ ವಿಷಯದ ಬಗ್ಗೆ ಇದ್ದ ಅನಿಶ್ಚಿತತೆ ಮಾರುಕಟ್ಟೆಯ ಮೇಲೆ ಕಾರ್ಮೋಡದಂತೆ ಆವರಿಸಿತ್ತು. ಈಗ ಆ ಕಾರ್ಮೋಡ ಕರಗಿದ್ದರಿಂದ ಹೂಡಿಕೆದಾರರು ಮುಕ್ತವಾಗಿ ಹೂಡಿಕೆಗೆ ಮುಂದಾಗಿದ್ದಾರೆ.

ಬೆಳಿಗ್ಗೆ 9:31ರ ಸುಮಾರಿಗೆ, ಸೆನ್ಸೆಕ್ಸ್ 2,291.17 ಪಾಯಿಂಟ್ಸ್ ಏರಿಕೆಯಾಗಿ 83,966.99 ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ50 ಸೂಚ್ಯಂಕ 702 ಪಾಯಿಂಟ್ಸ್ ಏರಿಕೆ ಕಂಡು 25,790.40 ಮಟ್ಟವನ್ನು ತಲುಪಿತ್ತು.

ಯಾವ ವಲಯಗಳಿಗೆ ಲಾಭ?

ಬ್ಯಾಂಕಿಂಗ್, ಹಣಕಾಸು, ಟೆಲಿಕಾಂ, ಕ್ಯಾಪಿಟಲ್ ಗೂಡ್ಸ್ ಮತ್ತು ಐಟಿ ವಲಯದ ಬ್ಲೂಚಿಪ್ ಷೇರುಗಳು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ವಿಶೇಷವಾಗಿ ಜವಳಿ ವಲಯದ ಷೇರುಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮರಳಿ ಮಾರುಕಟ್ಟೆಗೆ ಬರುತ್ತಿರುವುದು ಲಾರ್ಜ್‌ಕ್ಯಾಪ್ ಷೇರುಗಳಿಗೆ ಬಲ ತುಂಬಲಿದೆ.

Next Story