Great news for jewelry lovers: Gold prices drop sharply for the second consecutive day!
x

ಸಾಂದರ್ಭಿಕ ಚಿತ್ರ

Gold Rate Today | ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ!

ಬೆಳ್ಳಿ ದರದಲ್ಲಿ ಮತ್ತೆ ಏರಿಕೆ ಕಂಡಿದ್ದು, ಏ.30ರಂದು ಒಂದು ಕೆ.ಜಿ. ಬೆಳ್ಳಿಗೆ 2.50 ಲಕ್ಷ ರೂ. ತಲುಪಿತ್ತು. ಶುಕ್ರವಾರ ಒಂದು ಕೆ.ಜಿ. ಬೆಳ್ಳಿ ದರ 5 ಸಾವಿರ ರೂ. ಹೆಚ್ಚಳವಾಗಿದೆ.


Click the Play button to hear this message in audio format

ಆಭರಣ ಕೊಳ್ಳಬೇಕು ಎಂದುಕೊಳ್ಳವವರಿಗೆ ಹಾಗೂ ಚಿನ್ನ, ಬೆಳ್ಳಿ ಮೇಲೆ ಬಂಡವಾಳ ಹೂಡಿಕೆ ಮಾಡುವವರಿಗೆ ಸಿಹಿ ಸುದ್ದಿಯೊಂದಿದೆ. ಸದಾ ಏರಿಕೆ ಕಾಣುತ್ತಿದ್ದ ಚಿನಿವಾರ ಪೇಟೆ ಇದೀಗ ಇಳಿಕೆಯತ್ತ ಮುಖ ಮಾಡಿದ್ದು ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.

ಬೆಂಗಳೂರು ಸೇರಿದಂತೆ ದೇಶದ ಇತರೆ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿದರ ಕಡಿಮೆಯಾಗಿದ್ದು, 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 15,235 ರೂ ದಾಖಲಿಸಿದೆ. 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ 13,965 ಹಾಗೂ 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ 11,426 ರೂ. ಗೆ ತಲುಪಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 380 ರೂ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 350 ರೂ. ಹಾಗೂ 18 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 290 ರೂ. ಕಡಿಮೆಯಾಗಿದೆ.

ಮತ್ತೆ ಏರಿಕೆ ಕಂಡ ಬೆಳ್ಳಿ

ಚಿನ್ನದ ದರದಲ್ಲಿ ಕುಸಿತವಾಗಿದ್ದರೂ ಬೆಳ್ಳಿ ದರದಲ್ಲಿ ಮತ್ತೆ ಏರಿಕೆ ಕಂಡಿದೆ. ಏ.30ರಂದು ಒಂದು ಕೆ.ಜಿ. ಬೆಳ್ಳಿಗೆ 2.50 ಲಕ್ಷ ರೂ. ತಲುಪಿತ್ತು. ಶುಕ್ರವಾರ ಒಂದು ಕೆ.ಜಿ. ಬೆಳ್ಳಿ ದರ 5 ಸಾವಿರ ರೂ. ಹೆಚ್ಚಳವಾಗಿದ್ದು, 2.55 ಲಕ್ಷ ರೂ. ದಾಖಲಿಸಿದೆ. ಕಳೆದ ಮೂರು ದಿನಗಳಿಂದ ಹಿಂದೆ ಕಡಿಮೆಯಾಗಿದ್ದ ದರ ಇದೀಗ ಮತ್ತೆ ಏರಿಕೆಯಾಗಿರುವುದು ಗ್ರಾಹಕರಲ್ಲಿ ಬೇಸರ ಮೂಡಿಸಿದೆ.

ಯಾವ ನಗರದಲ್ಲಿ ಎಷ್ಟು ದರ ?

ಚೆನ್ನೈನಲ್ಲಿ 24 ಕ್ಯಾರೆಟ್ ಒಂದು ಗ್ರಾಂಗೆ ಚಿನ್ನದ ಬೆಲೆ 15,328 ರೂ, 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 14,050 ರೂ. ಅದೇ ರೀತಿ 18 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 11,750 ರೂ. ದೆಹಲಿಯಲ್ಲಿ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 15,250 ರೂ. 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 13,980 ರೂ. 18 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 11,441 ರೂ. ಆಗಿದೆ. ಹೈದರಾಬಾದ್‌ ಹಾಗೂ ಮುಂಬೈನಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 15,235 ರೂ. 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 13,965 ರೂ. 18 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 11,426 ರೂ. ಆಗಿದೆ.

ಬೆಲೆ ಇಳಿಕೆಗೆ ಜಾಗತಿಕ ಕಾರಣಗಳು

ಚಿನ್ನದ ಬೆಲೆಯಲ್ಲಿನ ಈ ಕುಸಿತಕ್ಕೆ ಪ್ರಮುಖವಾಗಿ ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ಹಾಗೂ ಭೌಗೋಳಿಕ ವಿದ್ಯಮಾನಗಳು ಕಾರಣವಾಗಿವೆ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿರುವುದು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಇದರ ಜೊತೆಗೆ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಜಾಗತಿಕ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯಿಂದ ಹಿಂದೆ ಸರಿದು ಪರ್ಯಾಯ ವಲಯಗಳತ್ತ ತಮ್ಮ ಗಮನ ಹರಿಸಿರುವುದು ಚಿನ್ನದ ದರ ಇಳಿಯಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

Read More
Next Story