Gold Price Today | Huge rise in gold price; Silver price remains unchanged!
x

ಸಾಂದರ್ಭಿಕ ಚಿತ್ರ (ಎಐ ಆಧಾರಿತ) 

Gold Price Today | ಚಿನ್ನದ ದರದಲ್ಲಿ ಭಾರೀ ಏರಿಕೆ; ಯಥಾಸ್ಥಿತಿ ದರ ಕಾಯ್ದುಕೊಂಡ ಬೆಳ್ಳಿ!

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದರೆ, ಅಂತರರಾಷ್ಟ್ರೀಯ ಬೆಲೆಗಳು ಸ್ಥಿರವಾಗಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ದುಬಾರಿಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


Click the Play button to hear this message in audio format

ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ ಮತ್ತು ಡಾಲರ್ ಎದುರು ರೂಪಾಯಿಯ ಮೌಲ್ಯದಲ್ಲಿನ ಏರಿಳಿತಗಳು ಈ ಬದಲಾವಣೆಗೆ ಪ್ರಮುಖ ಕಾರಣಗಳಾಗಿವೆ.

ಇಂದಿನ ಮಾರುಕಟ್ಟೆ ವಹಿವಾಟಿನ ಪ್ರಕಾರ 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 15,137 ರೂ. ಇದ್ದು, 10 ಗ್ರಾಂ ಗೆ 1,51,370 ರೂ. ದಾಖಲಾಗಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನ 13,875 ರೂ. ಗೆ ತಲುಪಿದ್ದು, 10 ಗ್ರಾಂ ಗೆ 1,38,750 ರೂ. ಹಾಗೂ 18 ಕ್ಯಾರೆಟ್‌ನ 1 ಗ್ರಾಂ ಚಿನ್ನ 11,353 ರೂ. ತಲುಪಿದ್ದು, 10 ಗ್ರಾಂ ಗೆ 1,13, 530 ರೂ. ತಲುಪಿದೆ. ಕಳೆದ 24 ಗಂಟೆಗಳಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 400 ರೂ. ಏರಿಕೆಯಾಗಿದೆ.

ಬೆಳ್ಳಿ ದರದಲ್ಲೂ ಹೆಚ್ಚಳ

ಕಳೆದ ಐದು ದಿನಗಳಲ್ಲಿ ಬೆಳ್ಳಿ ದರದಲ್ಲಿ ಯಾವುದೇ ಬದಲವಾಣೆಯಾಗದೇ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದ್ದು, ಒಂದು ಗ್ರಾಂ ಬೆಳ್ಳಿಗೆ 260 ರೂ, ದಾಖಲಾಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆ 2,60 ಲಕ್ಷ ರೂ. ಗೆ ತಲುಪಿದೆ. ಬೆಳ್ಳಿಯ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯ ದರಗಳು ಮತ್ತು ಡಾಲರ್-ರೂಪಾಯಿ ವಿನಿಮಯ ದರವನ್ನು ಅವಲಂಬಿಸಿರುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದರೆ, ಅಂತರರಾಷ್ಟ್ರೀಯ ಬೆಲೆಗಳು ಸ್ಥಿರವಾಗಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ದುಬಾರಿಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟು ?

ದೇಶದ ಪ್ರಮುಖ ನಗರಗಳಾದ ಚೆನ್ನೈನಲ್ಲಿ 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 15,219 ರೂ, 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 13,950 ರೂ. ಹಾಗೂ 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 11,635 ರೂ. ತಲುಪಿದೆ. ದೆಹಲಿಯಲ್ಲಿ 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 15,153 ರೂ, 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 13,890 ರೂ. ಹಾಗೂ 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 11,368 ರೂ. ತಲುಪಿದೆ. ಹೈದರಬಾದ್‌ ಹಾಗೂ ಮುಂಬೈನಲ್ಲಿ 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 15,137 ರೂ, 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 13,875 ರೂ. ಹಾಗೂ 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 11,353 ರೂ. ತಲುಪಿದೆ.

ಬೆಲೆ ಏರಿಕೆಗೆ ಕಾರಣವೇನು ?

ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ಮೀಸಲು ಸಂಗ್ರಹ ಹೆಚ್ಚಾಗಿರುವುದು ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಆಮದು ಪ್ರಮಾಣ ಏರಿಕೆಯಾಗಿರುವುದು ಚಿನ್ನದ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಜಾಗತಿಕ ಉದ್ವಿಗ್ನತೆ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳ ನಿರೀಕ್ಷೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ ಹೂಡಿಕೆದಾರರನ್ನು ಚಿನ್ನದತ್ತ ಸೆಳೆಯುವಂತೆ ಮಾಡಿರುವುದು ಬೆಲೆ ಹೆಚ್ಚಾಗುವಂತೆ ಮಾಡಿದೆ.

ಡಾಲರ್ ಸ್ಥಿರತೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಇಂಡೆಕ್ಸ್ 99.3 ಮಟ್ಟದಲ್ಲಿ ಸ್ಥಿರವಾಗಿರುವುದು ಸಹ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆಗೆ ಪೂರಕವಾಗಿದೆ.

ಖರೀದಿ ಆಸಕ್ತಿ: ಇತ್ತೀಚಿನ ಭಾರಿ ಕುಸಿತದ ನಂತರ ಹೂಡಿಕೆದಾರರಲ್ಲಿ ಕಂಡುಬಂದ ಅಲ್ಪಾವಧಿಯ ಖರೀದಿ ಆಸಕ್ತಿಯು ಬೆಲೆಯನ್ನು ಮತ್ತೆ ಮೇಲಕ್ಕೆತ್ತಿದೆ ಎಂದು ಇಂಡಿಯಾ ಬುಲಿಯನ್ & ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಉಪಾಧ್ಯಕ್ಷೆ ಅಕ್ಷಾ ಕಾಂಬೋಜ್ ತಿಳಿಸಿದ್ದಾರೆ.

Read More
Next Story