ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಶೇ.7.5 ರಷ್ಟು ಹೆಚ್ಚು ಐಟಿ ರಿಟರ್ನ್ಗಳು ಸಲ್ಲಿಕೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ತಿಳಿಸಿದೆ.
ನವದೆಹಲಿ, ಆಗಸ್ಟ್ 2 - ಜುಲೈ 31 ರಂದು ಅಂತ್ಯಗೊಂಡ ಗಡುವಿನೊಳಗೆ 7.28 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಯಾಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಇದು ಶೇ. 7.5 ರಷ್ಟು ಹೆಚ್ಚು ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ತಿಳಿಸಿದೆ.
ಜುಲೈ 31, 2024 ರವರೆಗೆ 7.28 ಕೋಟಿಗಿಂತ ಅಧಿಕ ಐಟಿಆರ್ ಸಲ್ಲಿಕೆಯಾಗಿದೆ. 2023-24 ರಲ್ಲಿ 6.77 ಕೋಟಿ ಐಟಿಆರ್ ಸಲ್ಲಿಕೆಯಾಗಿತ್ತು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ʻಹಳೆಯ ತೆರಿಗೆ ಪದ್ಧತಿಯಲ್ಲಿ 2.01 ಕೋಟಿ ಹಾಗೂ ಹೊಸ ತೆರಿಗೆ ಪದ್ಧತಿಯಡಿ 5.27 ಕೋಟಿ ಐಟಿಆರ್ ಸಲ್ಲಿಕೆಯಾಗಿದೆ. ಶೇ.72 ರಷ್ಟು ತೆರಿಗೆದಾರರು ಹೊಸ ತೆರಿಗೆ ಪದ್ಧತಿ ಆರಿಸಿಕೊಂಡಿದ್ದಾರೆ. ಶೇ. 28 ರಷ್ಟು ಮಂದಿ ಹಳೆಯ ಪದ್ಧತಿಯಲ್ಲೇ ಮುಂದುವರಿದಿದ್ದಾರೆ,ʼ ಎಂದು ಹೇಳಿದೆ.
ಜುಲೈ 31, 2024 ರಂದು (ವೇತನದಾರರು ಮತ್ತು ಇತರ ತೆರಿಗೆಯೇತರ ಆಡಿಟ್ ಪ್ರಕರಣಗಳಿಗೆ ಅಂತಿಮ ದಿನಾಂಕ) 69.92 ಲಕ್ಷಕ್ಕೂ ಹೆಚ್ಚು ಐಟಿಆರ್ ಸಲ್ಲಿಕೆಯಾಗಿದೆ. ಮೊದಲ ಬಾರಿ ಸಲ್ಲಿಸಿದವರ ಪ್ರಮಾಣ 58.57 ಲಕ್ಷ. ಇದು ತೆರಿಗೆ ಮೂಲ ವಿಸ್ತರಿಸಿದ ಸೂಚನೆ.
ಈ ಆರ್ಥಿಕ ವರ್ಷದಲ್ಲಿ ಸಲ್ಲಿಕೆಯಾದ 7.28 ಕೋಟಿ ಐಟಿಆರ್ಗಳಲ್ಲಿ ಶೇ.45.77 ಐಟಿಆರ್ 1 (3.34 ಕೋಟಿ), ಶೇ.14.93 ಶೇಕಡಾ ಐಟಿಆರ್ 2 (1.09 ಕೋಟಿ), ಶೇ.12.5 ಐಟಿಆರ್ 3 (91.10 ಲಕ್ಷ) , ಶೇ.25.77 ಐಟಿಆರ್ 4 (1.88 ಕೋಟಿ) ಮತ್ತು ಶೇ. 1.03 ಐಟಿಆರ್ 5 ರಿಂದ 7 (7.48 ಲಕ್ಷ).
ಐಟಿಆರ್ಗಳಲ್ಲಿ ಶೇ.43.82 ರಷ್ಟನ್ನು ಇ-ಫೈಲಿಂಗ್ ಪೋರ್ಟಲ್ನಲ್ಲಿ ಲಭ್ಯವಿರುವ ಆನ್ಲೈನ್ ಸೌಲಭ್ಯವನ್ನು ಬಳಸಿಕೊಂಡು ಮತ್ತು ಉಳಿದವುಗಳನ್ನು ಆಫ್ಲೈನ್ ನಲ್ಲಿ ಸಲ್ಲಿಸಲಾಗಿದೆ ಎಂದು ಹೇಳಿದೆ.
ಜುಲೈ 31, 2024 ರಂದು 3.2 ಕೋಟಿ ಯಶಸ್ವಿ ಲಾಗಿನ್ ಆಗಿದೆ. ಇ-ಪರಿಶೀಲನೆ ಬಳಿಕ ಮರುಪಾವತಿ ನೀಡಲಾಗುತ್ತದೆ. 6.21 ಕೋಟಿಗೂ ಹೆಚ್ಚು ಐಟಿಆರ್ಗಳನ್ನು ಇ-ಪರಿಶೀಲಿಸಲಾಗಿದೆ. ಇದರಲ್ಲಿ 5.81 ಕೋಟಿಗೂ ಹೆಚ್ಚು ಆಧಾರ್ ಆಧಾರಿತ ಒಟಿಪಿ (ಶೇ 93.56) ಮೂಲಕ ನಡೆದಿದೆ.
ಇ-ಫೈಲಿಂಗ್ ಸಹಾಯವಾಣಿ ತಂಡ ಜುಲೈ 31 ರವರೆಗಿನ ವರ್ಷದಲ್ಲಿ ತೆರಿಗೆದಾರರಿಂದ ಸರಿಸುಮಾರು 10.64 ಲಕ್ಷ ಪ್ರಶ್ನೆಗಳನ್ನು ನಿರ್ವಹಿಸಿ ದೆ. ಐಟಿಆರ್ ಅನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸದ ತೆರಿಗೆದಾರರು ತ್ವರಿತವಾಗಿ ಫೈಲಿಂಗ್ ಪೂರ್ಣಗೊಳಿಸುವಂತೆ ಇಲಾಖೆ ಕೋರಿದೆ.